ಬಾಗಲಕೋಟೆ : ಬಾಣಂತಿ ಅವಧಿಯಲ್ಲಿ ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯನ್ನು ಕೊಂದ ಪತಿಗೆ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಇಳಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಜೋಶಿ ಗಲ್ಲಿ ನಿವಾಸಿ ರಾಮಪ್ಪ ಹಣಮಪ್ಪ ವಡ್ಡರ ತನ್ನ ಪತ್ನಿ ಜೀಜಾಬಾಯಿ ಸಹಕರಿಸದ್ದಕ್ಕೆ 2013 ಜೂನ್ 13ರಂದು ಒದ್ದು ಹಲ್ಲೆ ಮಾಡಿದ್ದ. ಇದರಿಂದ ರಕ್ತಸ್ರಾವವಾಗಿ ಜೀಜಾಬಾಯಿ ಅಸುನೀಗಿದ್ದಳು.
ಅವಳ ತಾಯಿ ನೀಡಿದ ದೂರಿನನ್ವಯ ತನಿಖೆ ನಡೆಸಿದ ಸಿಪಿಐ ಕರುಣೇಶಗೌಡ ಅವರು ದೋಷಾ ರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಎರಡನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಯ್ಯದ ಬಳಿಗಾರ ರೆಹಮಾನ ಅವರು ಆರೋಪಿ ರಾಮ ಚಂದ್ರ ವಡ್ಡರಗೆ ಒಂದು ಲಕ್ಷ ರೂ ದಂಡ, ಮರಣ ದಂಡನೆ ಶಿಕ್ಷೆ ವಿಧಿಸಿದರು.
ಮೃತಳ ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರ ದಿಂದ 5 ಲಕ್ಷ ರೂ ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಸುನೀಲ ಹಂಜಿ ವಕಾಲತ್ತು ವಹಿಸಿದ್ದರು.
Leave a Comment