ಹೊನ್ನಾವರ : ತಾಲೂಕಿನ ಕಳಸಿನ ಮೋಟೆಯ ಸಮೀಪ ರೈಲು ಸೇತುವೆಯ ಮೇಲೆ ವ್ಯಕ್ತಿಯೊಬ್ಬ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ . ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಕಬ್ಬಿಣದ ಸಲಾಕೆಗೆ ನೇತಾಡುತ್ತಿ ದ್ದನ್ನು ನೋಡಿ ಸ್ಥಳೀಯರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ದರು ಚಿಕಿತ್ಸೆ ಪಫಲಕಾರಿಯಾಗದೆ ಮೃತ ಪಟ್ಟ ಘಟನೆ ವರದಿಯಾಗಿದೆ .

ಮಂಗಳೂರು ಪ್ರೇಮ್ ನಗರದ ಸುನೀಲ್ ಲಾರೆನ್ಸ್ ರೋಡ್ರಿಗಿಸ್ ಮೃತ ಪಟ್ಟವರಾಗಿದ್ದು , ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದರು ಎಂದು ಪೋಷಕರು ತಿಳಿಸಿದ್ದಾರೆ . ಮೃತ ವ್ಯಕ್ತಿಯ ತಂದೆ ತಾಯಿ ಹೊನ್ನಾವರ ಪೊಲೀಸ್ ಠಾಣೆಗೆ ಆಗಮಿಸಿ ಗುರುತು ಪತ್ತೆ ಹಚ್ಚಿದ್ದಾರೆ . ಶವ ಮರಣೋತ್ತರ ಪರೀಕ್ಷೆಯ ಬಳಿಕ ಮೃತ ದೇಹ ಮಂಗಳೂರಿಗೆ ಕೊಂಡ್ಯೊದ್ದಿದ್ದಾರೆ.
Leave a Comment