ಹೊನ್ನಾವರ : ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿರುದ್ಧ ಅವಹೇಳಕಾರಿ ಪೊಸ್ಟ ಸಂಭದ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ .
ಕಾರವಾರ ಶಾಸಕಿ ರೂಪಾಲಿ ನಾಯ್ಕ ವಿಧಾನಮಂಡಲದ ಕಾರ್ಯಕಲಾಪದ ಚುಕ್ಕಿ ಪ್ರಶೋತ್ತರ ಅವಧಿಯಲ್ಲಿ ಜಿಲ್ಲೆಯ ಬೇಡಿಕೆಯಾದ ಮಲ್ಟಿಸ್ಪೆಷಾಲಟಿ ಆಸ್ಪತ್ರೆಯ ವಿಷಯವಾಗಿ ಪರಸ್ಪರ ಸಂಭಾಷಣೆಯ ಸಾಮಾಜಿಕ ಜಾಲತಾಣದ ನಮ್ಮಯುಕೆ ಎಂಬ ಖಾತೆಯಲ್ಲಿ ಎ.ಜೆ.ಅಶೋಕ ಎನ್ನುವವರು ಉದ್ರೇಕ ಹಾಗೂ ಪ್ರಚೋದನೆ ರೀತಿಯಲ್ಲಿ ಪ್ರಸಾರ ಮಾಡಿದ್ದರು .
ಈ ಪೊಸ್ಟಗೆ ಗಣೇಶ ಗೌಡ ಎನ್ನುವ ಫೇಸ್ಬುಕ್ ಖಾತೆಯಿಂದ ಕಾಗೇರಿಯವರ ಕುರಿತು ಆಂಗ್ಲ ಭಾಷೆಯಲ್ಲಿ ಅವಹೇಳನ ಆಗುವ ರೀತಿಯಲ್ಲಿ ಕಮೆಂಟ್ ಹಾಕಿದ್ದಾರೆ . ಸಪ್ಟೆಂಬರ್ 15 ರ ಸಾಯಂಕಾಲ 4 ಗಂಟೆಗೆ ಈ ರೀತಿ ಅಭಿಪ್ರಾಯದ ಪೊಸ್ಟ ಹಾಕಲಾಗಿದೆ . ರಾಜ್ಯದ ಸಂವಿಧಾನಾತ್ಮಕ ಗೌರವ ಸ್ಥಾನದಲ್ಲಿರುವ ಸಭಾಧ್ಯಕ್ಷರಿಗೆ ತೆಜೋವಧೆ ಮಾಡುವ ರೀತಿಯಲ್ಲಿ ಪೊಸ್ಟ ಮಾಡಿದವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ತಾಲೂಕಿನ ಹೊಸಕುಳಿ ಗ್ರಾಮದ ವಸಂತ ನಾಯ್ಕ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ .
ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ಹಳದೀಪುರ ಬಡಗಣೆ ಮೂಲಕ ಗಣೇಶ ಗೌಡ ಎನ್ನುವವರರನ್ನು ವಶಕ್ಕೆ ಪಡೆದು ತಾಲೂಕ ದಂಡಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ .
Leave a Comment