ನವದೆಹಲಿ : ಚಿನ್ನ ಕಳ್ಳಸಾಗಣೆ ಮಾಡಲು ಸಹಕರಿಸುತ್ತಿದ್ದ ಇಂಡಿಗೋ ಏರ್ ಲೈನ್ಸ್ನ ಇಬ್ಬರು ಉದ್ಯೋಗಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಇಂಡಿಗೋ ಏರ್ ಲೈನ್ಸ್ ಸಾಜಿದ್ ರೆಮಾನ್ ಮತ್ತು ಮೊಹಮ್ಮದ್ ಸಾಮಿಲ್ ನನ್ನು ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿಂದು ಬಂಧಿಸಿದ್ದಾರೆ. ಈ ಇಬ್ಬರು ಅಧಿಕಾರಿಗಳು ಸುಮಾರು 4.9 ಕೆ.ಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯಾಣಿಕರಿಗೆ ಸಹಕರಿಸಲು ಪ್ರಯತ್ನಿಸುತ್ತಿದ್ದರು.
ತಪಾಸಣೆ ವೇಳೆ ವಿಮಾನ ನಿಲ್ದಣದಲ್ಲಿ ಲಗೇಜ್ ಬಿಟ್ಟು ಪರಾರಿಯಾದ ಪ್ರಯಾಣಿಕನ ಲಗೇಜ್‌ನಲ್ಲಿ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು 2.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇತ್ತೀಚೇಗೆ ದೇಶದ ಹಲವು ಅಂತಾರಾಷ್ಟಿçÃಯ ವಿಮಾನ ನಿಲ್ದಾಣಗಳಲ್ಲಿ ಕಳ್ಳಸಾಗಣೆಯ ಪ್ರಕರಣಗಳು ವರದಿಯಾಗಿದ್ದು ನಿರಂತರವಾಗಿ ಅವುಗಳನ್ನು ಛೇಧಿಸುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗುತ್ತಿದ್ದಾರೆ.
Leave a Comment