ರೈತ ಕುಟುಂಬದ ಎಲ್ಲಾ ಮಕ್ಕಳು ಇತರೆ ಯಾವುದೇ ವಿದ್ಯಾರ್ಥಿ ವೇತನ ಪಡೆ ಯುತ್ತಿದ್ದರೂ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಪಡೆಯಲು ಅರ್ಹರಾಗಿ ರುತ್ತಾರೆಂದು ಬೆಂಗಳೂರು ನಗರ ಜಿಲ್ಲೆಯ ಉಪ ಕೃಷಿ ನಿರ್ದೇಶಕಿ ಬಿ.ಟಿ. ವಿನುತ ಹೇಳಿದರು.
ಯಲಹಂಕ ತಾಲೂಕಿನ ಚಿಕ್ಕಜಾಲ ರೈತ ಸಂಪರ್ಕ ಕೇಂದ್ರ ಮತ್ತು ಲಯನ್ಸ್ ಕ್ಲಬ್ ಯಲಹಂಕದ ಸಂಯುಕ್ತಾಶ್ರಯ ದಲ್ಲಿ ಸಿಂಗನಾಯಕನ ಹಳ್ಳಿಯ ಆರ್‌ಟಿ ನಗರ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ರೈತ ವಿದ್ಯಾನಿಧಿ ಹಾಗೂ ಮೊಬೈಲ್ ಆ್ಯಫ್‌ನಲ್ಲಿ ಬೆಳೆ ಸಮೀಕ್ಷೆ ಕುರಿತು ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಸರ್ಕಾರವು ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಮುಖ್ಯಮಂತ್ರಿ ರೈತನಿಧಿ ಎಂಬ ಹೊಸ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ರಾಜ್ಯದಲ್ಲಿ 8 ರಿಂದ 10 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ 2000 ರೂ. ವಿದ್ಯಾರ್ಥಿವೇತನ ಸೇರಿದಂತೆ 10ನೇ ತರಗತಿ ಪೂರ್ಣಗೊಳಿಸಿ ಪಿಯುಸಿ, ಪದವಿ, ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶ ಪಡೆದಿರುವ ರೈತರ ಮಕ್ಕಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ 2500 ರಿಂದ 11000 ರೂ. ಗಳವರೆಗೆ ಶಿಷ್ಯವೇತನ ಒದಗಿಸುವ ಯೋಜನೆ ಇದಾಗಿದೆ ಎಂದರು.
ಬೆA. ಉತ್ತರ ಸಹಾಯಕ ಕೃಷಿ ನಿರ್ದೇಶಕಿ ವಿನೋದಮ್ಮ, ಯಲಹಂಕ ಲಯನ್ಸ್ ಅಧ್ಯಕ್ಷ ಅನಂತರಾಮು, ಪ್ರಾಂಶುಪಾಲರಾದ ಶೋಭಾ ಪಾಟೀಲ್, ತಾಂತ್ರಿಕ ಕೃಷಿ ಇಲಾಖೆ ಕೃಷಿ ಅಧಿಕಾರಿ ರುದ್ರಸ್ವಾಮಿ, ಎಚ್.ಎನ್.ಮಾನಸ, ಕಿರಣ್ ಮತ್ತಿತರರಿದ್ದರು.
ರೈತರು ಮೊಬೈಲ್ ಆ್ಯಫ್ ನಲ್ಲಿ ತಮ್ಮ ಜಮೀನುಗಳಲ್ಲಿ 2022 ರ ಮುಂಗಾರು ಬೆಳೆ ಸಮೀಕ್ಷೆ ಯನ್ನು ಕೈಗೊಳ್ಳಲು ಕೃಷಿ ಇಲಾಖೆಯು ಅವಕಾಶ ಕಲ್ಪಸಿದ್ದು ಜಿಲ್ಲೆಯ ರೈತರು ತಮ್ಮ ಮೊಬೈಲ್ ನಲ್ಲಿ ಆಪ್ ಲೋಡ್ ಮಾಡಲು ಅವಕಾಶ ಕಲ್ಪಸಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಿ.
ವಾಣಿಶ್ರಿ ವಿಶ್ವನಾಥ್ ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷೆ
Leave a Comment