ಕಾರವಾರ : ಜಿಲ್ಲೆಯ ಕಾರವಾರ ಲೋಕಾಯುಕ್ತ ಕಛೇರಿಯ ಅಧಿಕಾರಿಗಳು ಕುಮಟಾ ತಾಲೂಕು ಕೇಂದ್ರಕ್ಕೆ ಭೆಟಿ ನೀಡಲಿದ್ದು, ಸಾರ್ವಜನಿಕರಿಂದ ಕರ್ನಟಕ ಲೋಕಾಯುಕ್ತ ಕಾಯ್ದೆಯಡಿ ಭರ್ತಿಮಾಡಿದ ದೂರು ಅರ್ಜಿಗಳನ್ನು ಸ್ವೀಕಾರ ಹಾಗೂ ವಿಚಾರಣೆ ಮಾಡುವರು ಸೆ. 26 ರ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕುಮಟಾ (ಐಬಿ) ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲನ್ನು ಮತ್ತು ಅರ್ಜಿಗಳನ್ನು ಸ್ವೀಕರಿಸುತ್ತಾರೆ.
ಈ ಸಂಬAಧ ತಾಲೂಕಿನ ಯಾವುದೇ ಸರ್ಕಾರಿ ಕಾರ್ಯಾಲಯದಲ್ಲಿ ಸಾರ್ವಜನಿಕರಿಗೆ ಕೆಲಸ ಮಾಡಿ ಕೊಡುವಲ್ಲಿ ಅನಾವಶ್ಯಕ ವಿಳಂಬ ಅಥವಾ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಮೂನೆ 1 & 2 ರಲ್ಲಿ ಭರ್ತಿ ಮಾಡಿ ನೀಡಿಬಹುದಾಗಿದೆ ಅಥವಾ ಕಾರವಾರ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ದೂರು ನೀಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08382- 295293/222250/222022/220198 ಗೆ ಸಂಪರ್ಕಿಸಬಹುದೆAದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment