ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ದೇಶದಲ್ಲಿ ಡಿಜಿಟಲ್ ಸಾಲದ ಆ್ಯಪ್ ಗಳನ್ನು ನಿಯಂತ್ರಿಸಲು ಗೂಗಲ್ ಕಂಪನಿ ತನ್ನ ಪರಿಶೀಲನಾ ಪ್ರಕ್ರಿಯೆಯನ್ನು ಇನ್ನಷ್ಟು ಕಠಿಣವಾಗಿ ಮಾಡಬೇಕೆಂದು ಸೂಚಿಸಿದೆ. ಕೇಂದ್ರ ಸರಕಾರ ಸಹ ಈ ಬಗ್ಗೆ ಗೂಗಲ್ ಮೇಲೆ ಒತ್ತಡ ಹೇರಿದೆ.
ಗೂಗಲ್ ದೇಶದಲ್ಲಿ ರಿಸರ್ವ್ ಬ್ಯಾಂಕ್ ರೂಪಿಸಿರುವ ನಿಯಮಗಳ ಅನುಸಾರವಾಗಿ ವ್ಯವಹಾರ ನಡೆಸುತ್ತಿಲ್ಲ. ಹಣಕಾಸು ಸೇವೆ ನೀಡುವ ಆ್ಯಪ್‌ಗಳು ಸೇರಿ, ಪ್ಲೇಸ್ಟೋರ್‌ನ ನಿಯಮಗಳನ್ನು ಸೆಪ್ಟೆಂಬರ್ 2021ರಲ್ಲೇ ಪರಿಷ್ಕರಿಸಲಾಗಿದೆ.
ವೈಯಕ್ತಿಕ ಸಾಲ ಸೌಲಭ್ಯ ನೀಡುವಂತಹ 2 ಸಾವಿರಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಪ್ಲೇಸ್ಟೋ ನಿಂದ ತೆಗೆಯಲಾಗಿದೆ. ಈ ಆ್ಯಪ್‌ಗಳು ನಿಯಮ ಉಲ್ಲಂಘಿಸಿದ ಕಾರಣ ತೆಗೆದುಹಾಕಲಾಗಿದೆ ಎಂಬುದು ಗೂಗಲ್ ವಕ್ತಾರರ ವಾದ. ಈ ಬಗ್ಗೆ ಕೇಂದ್ರ ಸರಕಾರ ಆಥವಾ ಆರ್‌ಬಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ಕೆಲ ತಿಂಗಳುಗಳಿಂದ ಹಲವು ಸಭೆಗಳಲ್ಲಿ ಗೂಗಲ್ ಗೆ ಹಾಜರಾಗಲು ಸೂಚಿಸಲಾಗಿತ್ತು. ಹಾಗೂ ಈ ಆ್ಯಪ್‌ಗಳನ್ನು ತೆಗೆದುಹಾಕಲು ನೆರವಾಗುವಂತೆ ಕಂಪನಿಯು ಕಠಿಣ ನಿಯಮ ಜಾರಿಗೊಳಿಸಬೇಕು ಎಂದು ಕೇಂದ್ರ ಹಾಗೂ ಆರ್ ಬಿಐ ಗೂಗಲ್‌ಗೆ ಸೂಚಿಸಿತ್ತು ಎಂದು ಮೂಲಗಳು ತಿಳಿಸಿವೆ.
ಇತರ ವೆಬ್‌ಸೈಟ್‌ಗಳು ಮತ್ತು ಬೇರೆ ಮೂಲಗಳಿಂದ ಇಂತಹ ಆ್ಯಪ್‌ಗಳು ಲಭ್ಯವಾಗುವುದನ್ನು ತಡೆಯುವ ಬಗ್ಗೆಯೂ ಗಮನ ಹರಿಸುವಂತೆ ಗೂಗಲ್‌ಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ವಿವರಿಸಿವೆ.
ಉದ್ಯಮದ ವಲಯದಿಂದ ಬರುವ ದೂರುಗಳನ್ನು ಆಧರಿಸಿ ಕ್ರಮ ಜರುಗಿಸುವುದನ್ನು ಗೂಗಲ್ ಆರಂಭಿಸಿದೆ. ನಿರ್ದಿಷ್ಟ ಆ್ಯಪ್‌ಗಳ ಬಗ್ಗೆ ದೂರು ನೀಡಿದಾಗ ಗೂಗಲ್ ಈ ಮೊದಲು ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದರೆ ಈಗ ಕಂಪನಿಯು ಹೆಚ್ಚು ಸ್ಪಂದನಶೀಲವಾಗಿದೆ ಎನ್ನಲಾಗಿದೆ. ಸಾಲ ಕೊಡಲು ಮಾನ್ಯತೆ ಪಡೆದಿರುವ ಆ್ಯಪ್‌ಗಳ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸ ಆರ್‌ಬಿಐ ಹಾಗೂ ಸರಕಾರದ ಮಟ್ಟದಲ್ಲಿ ನಡೆದಿದೆ.
Leave a Comment