ಕಾರವಾರ: ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿ, ಕಾರವಾರ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಧಾರವಾಡ ಇವರ ಸಹಯೋಗದೊಂದಿಗೆ ಸೆ. 26 ರಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:00 ಗಂಟೆಗಳ ವರೆಗೆ ಬೆಂಗಳೂರು ಟೊಯೋಟ ಕಿರ್ಲೋಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್, ಇವರು ಐಟಿಐ ಟ್ರೇಡ್‌ಗಳಾದ ಫಿಟ್ಟರ್, ಎಲೆಕ್ನಿಶಿಯನ್, ಟರ್ನರ್, ಮೋಟರ್ ಮೆಕ್ಯಾನಿಕ್ ವೆಹಿಕಲ್, ಡಿಸೈಲ್ ಮೆಕ್ಯಾನಿಕ್, ವೆಲ್ಡರ್, ಮೆಕ್ಯಾನಿಸ್ಟ ಎಲೆಕ್ಟ್ರಾನಿಕ್ ಮ್ಯಾಕೆನಿಕಲ್ ಟ್ರೇಡ್‌ಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಕಾರವಾರ ಬಾಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇಲ್ಲಿ ಅಪ್ರೆಂಟಿಸ್ ಮೇಳವನ್ನು ಅಯೋಜಿಸಲಾಗಿದೆ.
ಆಸಕ್ತ 18 ರಿಂದ 24 ವರ್ಷದೊಳಗಿನ ಐ.ಟಿ.ಐ ಟ್ರೇಡ್‌ಗಳಲ್ಲಿ 50% ಅಂಕಗಳೊಂದಿಗೆ ತೇರ್ಗಡೆಯಾದ ಅಭ್ಯರ್ಥಿಗಳು ರೆಗ್ಯೂಮ್‌ಗಳು, ಆಧಾರ್ ಕಾರ್ಡ್, ಇತ್ತೀಚಿನ ಪಾಸ್‌ಪೇರ್ಟ ಸೈಜ್ 8 ಪೋಟೋಗಳೊಂದಿಗೆ, ಕಾರವಾರ ಬಾಡ ಸರ್ಕಾರಿ ಕೈಗಾರಿಕಾ ತರಭೇತಿ ಸಂಸ್ಥೆಗೆ ಭೇಟಿ ನೀಡಿ ಭಾಗವಹಿಸಬಹುದು. ಊಟ, ಸಾರಿಗೆ, ಸ್ಟೈಫಂಡ್ ಸೌಲಭ್ಯ ಉಚಿತವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕಚೇರಿ ಮೊಬೈಲ್ ಸಂಖ್ಯೆ +91-8310044796, 9743360656, ಅಥವಾ ಕಛೇರಿ ದೂರವಾಣಿ ಸಂಖ್ಯೆ: 08382-226386 ಗೆ ಸಂಪರ್ಕಿಸಿ. ಎಂದು ಯೋಜನಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
Leave a Comment