ಹೊನ್ನಾವರ : ಅನಧಿಕೃತವಾಗಿ ಪಟಾಕಿ ತಯಾರಿಸುತ್ತಿದ್ದ ತಾಲೂಕಿನ ಕರ್ಕಿ ಸಮೀಪದ ಮೂರು ಮನೆಗಳ ಮೇಲೆ ಪೋಲಿಸರು ದಾಳಿ ನಡೆಸಿದ್ದಾರೆ.
ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ, ಮಾನವ ಪ್ರಾಣಕ್ಕೆ ಅಪಾಯಾವಾಗುವಂತೆ ಮನೆಯಲ್ಲಿಯೇ ಪಟಾಕಿ ತಯಾರಿಸುತ್ತಿದ್ದ ಆರೋಪದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಮೂರು ಮನೆಗಳಲ್ಲಿ ದಸರಾ ಹಾಗೂ ದೀಪವಾಳಿ ಹಬ್ಬದಲ್ಲಿ ಮಾರಾಟ ಮಾಡಲು ಪಟಾಕಿ ತಯಾರಿಕೆಗೆ ಬಳಸಿದ್ದ ಗಂಧಕದ ಪುಡಿ, ಸುರಳಿ ಸುತ್ತುವ ಕಾಗದ, ತಯಾರಿಸಿದ ಗರ್ನಾಲ್ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದರು.
ದಾಳಿ ವೇಳೆ ಪಟಾಕಿಗೆ ಬಳಸುವ ಸಾಮಾಗ್ರಿಗಳನ್ನು, ಪರೀಕರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕರ್ಕಿ ನಡುಚಿಟೆಯ ನಿವಾಸಿಗಳಾದ ಖಾಸೀಮ್ ಹುಸೇನ್ ಸಾಭ್, ಇಸ್ಮಾಯಿಲ್ ಯೂಸುಫ್ ಸಾಬ್, ಹೆಗಡೆಹಿತ್ಲದ ನಿವಾಸಿ ಅಮೀನಾಬಿ ಹಸನ್ ಸಾಬ್ ಎನ್ನುವವರ ಮೇಲೆ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ.
Leave a Comment