ಅಂಕೋಲಾ: ವ್ಯಕ್ತಿಯೊಬ್ಬನಿಗೆ ಕೇಂದ್ರ ಸರ್ಕಾರದ ಉದ್ಯೋಗ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ.ವಂಚಿಸಿದ ಘಟನೆ ಕುರಿತು ಮಂಗಳವಾರ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಕರಮಠ ವಿಠೋಬ ದೇವಸ್ಥಾನ ಸಮೀಪದ ನಿವಾಸಿ ವಿಶಾಲ ವಿವೇಕಾನಂದ ನಾರ್ವೇಕರ ವಂಚನೆಗೆ ಒಳಗಾದ ವ್ಯಕ್ತಿ. ಮುಂಬೈ ಮೂಲದ ಗೌರೇಶ ಸಂತೋಷ ಬಾಂದೇಕರ, ಪ್ರೇಮ್ ಕುಮಾರ ಎನ್.ಸೋಲಂಕಿ ವಂಚಿಸಿದ ಆರೋಪಿಗಳು. ಇವರ ವಿರುದ್ಧ ವಿಶಾಲ ನಾರ್ವೇಕರ ದೂರು ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದ ಉದ್ಯೋಗ ನೀಡುವುದಾಗಿ ಗೌರೇಶ ಬಾಂದೇಕರ ಈತನು ವಿಶಾಲ ನಾರ್ವೇಕರ್ ಇವರಿಂದ ನ.8, 2019 ರಿಂದ ಜುಲೈ 6, 2020ರೊಳಗಾಗಿ ಆಕ್ಸಿಸ್ ಬ್ಯಾಂಕ್ ಖಾತೆಗೆ 9.50 ಲಕ್ಷ ರೂ. ಮತ್ತು ಪ್ರೇಮ್ ಕುಮಾರ ಸೋಲಂಕಿ ಈತನು ಕೋಟೆಕ್ ಮಹೀಂದ್ರಾ ಬ್ಯಾಂಕ್ ಖಾತೆಗೆ 5 ಲಕ್ಷ ರೂ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹಣ ವಾಪಸ್ ನೀಡುವ ಕುರಿತು ವಿಚಾರಿಸಿದಾಗ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
Leave a Comment