ಭಟ್ಕಳ: ಸಂಬಂಧಿಕರ ಮನೆಗೆ ಹೋಗಿ ಬರುವುದರೊಳಗಾಗಿ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ರಹಮತಾಬಾದಿನಲ್ಲಿ ನಡೆದಿದೆ .


ತಾಲೂಕಿನ ರಹಮತಾಬಾದ ನಿವಾಸಿ ಶ್ರೀಮತಿ ಲೈಕುನ್ನಿಸಾ ಐದ್ರುಸಾ ಅಬ್ದುಲ್ ಅಜೀಜ್ ಅಜಾಯಿಬ್ ಎಂಬುವವರ ಮನೆಯನ್ನು ಕಳ್ಳತನ ಮಾಡಲಾಗಿದೆ.ಇವರೆಲ್ಲ ಸಂಬಂಧಿಕರ ಮನೆಗೆ ಹೋಗಿ ಬರುವುದಲೊಳಗಾಗಿ ಮನೆಯ ಬಾಗಿಲನ್ನು ಮುರಿದು ಮಲಗುವ ಕೋಣೆಯ ಫರ್ನಶಿ ಕಪಾಟಿನಲ್ಲಿ ಲೈಕುನ್ನಿಸಾ ಐದ್ರುಸಾ ಅಬ್ದುಲ್ ಅಜೀಜ್ ಅಜಾಯಿಬ್ ಹಾಗು ಇಬ್ಬರ ಮಕ್ಕಳಿಗೆ ಸೇರಿದ ಸುಮಾರು 325 ಗ್ರಾಂ ತೂಕದ 14,60,000 ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Leave a Comment