ಹಳಿಯಾಳ : ದಿನಾಂಕ 01-10-2022 ರಂದು ವಿಶ್ವನಾಥರಾವ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಿರಿಯರ ದಿನಾಚರಣೆಯನ್ನು ಹಮ್ಮಿಕೊಳ್ಳ ಲಾಗಿತ್ತು.
ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮತ್ತು ಸಸಿಗಳಿಗೆ ನೀರು ಎರೆಯುವ ಮೂಲಕ ಪ್ರಾರಂಭವಾಯಿತು.
ಸುರೇಶ ಕಡೇಮನಿ ಪ್ರಾರ್ಥನಾ ಗೀತೆ ಹಾಡಿದರು. ಜಿ. ಡಿ. ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿ
ಸಂಘವು ಸ್ಥಾಪನೆಗೊಂಡಿದ್ದು ಸಂಘದ ಸಾಮಾಜಿಕ ಕಾರ್ಯಕಲಾಪಗಳು ಹಾಗೂ ನಾಡ ಹಬ್ಬ ರಾಷ್ಟ್ರ ಹಬ್ಬಗಳ ಆಚರಣೆಗಳನ್ನು ಆಚರಿಸುತ್ತಾ ಬಂದಿರುವ ಹಿನ್ನೆಲೆಯನ್ನು ಹಾಗೂ ಸಂಘವು ನಡೆದು ಬಂದ ದಾರಿಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಶಾಹರಿ ಹಾಗೂ “ಮುಪ್ಪಿನಲ್ಲಿ ನಾಂವ ಹೆಂಗಿರಬೇಕ ” ಎಂಬ ಜಾನಪದ ಗೀತೆಯನ್ನ ಹಾಸ್ಯಭರಿತವಾಗಿ ಹಾಡಿ ನೆರೆದ ಜನ ಸಮೂಹವನ್ನ ನಗೆಗಡಲದಲ್ಲಿ ತೇಲಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಡಾ. ಲಕ್ಷಿದೇವಿಯವರು ಆರೋಗ್ಯದ ಬಗ್ಗೆ ಕಾಳಜಿ, ಸಮಯಕ್ಕೆ ಸರಿಯಾಗಿ ಮಿತ ಆಹಾರ, ಹಾಗೂ ಬೆಳಿಗ್ಗೆ ಒಂದಿಷ್ಟು ನಡಿಗೆ ಮಾಡುತ್ತ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿರಿ ಹಿರಿಯರು ಮರಕ್ಕೆ ಬೇರುಗಳಿದ್ದ೦ತೆ ಬೇರು ಚೆನ್ನಾಗಿದ್ದರೆ ಮರ ಹೇಗೆ ಭಲಿಷ್ಟವಾಗಿರುತ್ತದೆಯೋ ಹಾಗೆ ನೀವುಗಳು ಹಿರಿಯರು ಬೇರುಗಳ ಹಾಗೆ ಗಟ್ಟಿಯಾಗಿದ್ದರೆ ಇಂತಹ ಕಾರ್ಯಕ್ರಮಗಳು ನೆರವೇರಲು ಸಾಧ್ಯ ಸಮಾಜದಲ್ಲಿ ಇಂತಹ ಕಾರ್ಯಕ್ರಮಗಳು ಯುವಕರಿಗೆ ದಾರಿದೀಪಗಳು ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ VDRI ತಾಂತ್ರೀಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿ. ಎ.ಕುಲಕರ್ಣಿ ರವರು ಬಸವಣ್ಣನವರ ವಚನ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ವಚನದ ವಿಶ್ಲೇಷನೆ ಗೈಯುತ್ತ
ಸಮಾಜ ನಿಂತು ನೀರಾಗದೆ ಸದಾ ಹರಿಯುವ ನೀರಾಗಬೇಕು ಯಾವುದು ಒಂದೆಡೆ ನಿಂತು ಸ್ಥಾವರವಾಗುವುದೋ ಅದು ಒಂದು ದಿನ ನಾಶವಾಗುವುದು
ಜಂಗಮ ಅಂದರೆ ಸದಾ ಚಲನೆ
ಅದರಂತೆ ನಾವು ಸದಾ ಲವಲವಿಕೆಯಿಂದ ಚಟುವಟಿಕೆಯಿಂದ ಇರಬೇಕು
ಎಂದು ಹೇಳುತ್ತಾ
ಹಿರಿಯರ ಆಶೀರ್ವಾದವೊಂದಿದ್ದರೆ ನಮಗೆ ಆನೆ ಬಲ ಬರುತ್ತದೆ.
ನೀವು ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರು ನಾವು ನಿಮಗೆ ಸಹಾಯ ಸಹಕಾರ ಕೊಡಲು ನಾವು ಸಿದ್ದರಿದ್ದೇವೆ ಎಂದರು. ಹಿರಿಯರ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರತಿ ವರ್ಷದಂತೆ ಆಯ್ದ ಐದು ಹಿರಿಯ ಚೇತನಗಳಿಗೆ ಸನ್ಮಾನ.
ಶೋಭಾ, ಲೋಕರೆ. ಸುಭಾಷ, ಗೋಕಾವಿ. ಗುರುದಾಸ, ವೆರ್ಣೇಕರ್. ಶಂಕರ, ಎಲ್, ರೇಣಕೆ. ದೀಲಿಪ, ಕೆ, ರಗಟೆ
ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಪ್ರೊಪೆಸ್ಸರ ಮಂಜುನಾಥ, ಡೊಳ್ಳಿನ ನಡೆಸಿಕೊಟ್ಟರು.
ಕಾರ್ಯಕ್ರಮದ ನಿರೂಪಣೆ ಪ್ರೊಪೆಸ್ಸರಾದ ಅಭಯ, ಇಂಚಲರವರು ಮಾಡಿದರು. ಈ
ಕಾರ್ಯಕ್ರಮದಲ್ಲಿ
ರಾಜ್ಯ ನಿವೃತ್ತ ನೌಕರರ ಸಂಘ ಹಳಿಯಾಳದ ಅಧ್ಯಕ್ಷರಾದ ಡಿ. ಎಮ್.ಸಾವಂತ .ಅರವಿಂದ ಪಾಠಣಕರ, ಪಿ. ಬಿ. ಪಾಟೀಲ. ಕೆ.ಎಚ್. ಪಾಟೀಲ. ಆರ್. ವಾಯ್.ಚಿವುಟ ಗುಂಡಿ,ಹಳಿಯಾಳ, ತೇರಗಾಂವ, ಯಡೋಗಾ ಗ್ರಾಮಗಳಿಂದ 80 ರಿಂದ 90 ಜನ ಹಿರಿಯ ನಾಗರೀಕರು ಆಗಮಿಸಿದ್ದರು.
ಆಗಮಿಸಿದ ಎಲ್ಲ ಹಿರಿಯ ನಾಗರಿಕರಿಗೆ ಸಿಹಿ ಭೋಜನ ಕೂಟವನ್ನು VDRI ತಾಂತ್ರಿಕ ಮಹಾವಿದ್ಯಾಲಯದವರು ಮಾಡಿದ್ದರು.
ಹಳಿಯಾಳ
ವರದಿ : ಮಂಜುನಾಥ. ಹ. ಮಾದಾರ
Leave a Comment