ಜೈ ಶ್ರೀರಾಮ ಹಿಂದೂ ಸಂಘದ ಸಭೆOctober 8, 2022 by manjunath maadaar Leave a Commentಹಳಿಯಾಳ : ಇಂದಿರಾ ನಗರದ ಸಂಘದ ಕಚೇರಿಯಲ್ಲಿ ಜೈ ಶ್ರೀ ರಾಮ ಹಿಂದೂ ಸಂಘ (ರಿ) ಹಳಿಯಾಳದ ಸರ್ವ ಸಾದಾರಣ ಸಭೆ ನಡೆಯಿತು ಈ ಸಭೆಯಲ್ಲಿ ಹಲವಾರು ವಿಷಯಗಳನ್ನು ಚರ್ಚೆ ಮಾಡಲಾಯಿತು. ಪ್ರತಿ ತಿಂಗಳ 4ನೇ ಶನಿವಾರ ಸಂಘದ ಎಲ್ಲಾ ಸದಸ್ಯರು ಸಭೆ ಸೇರುವುದು, ಪ್ರತಿ ತಿಂಗಳು ಸಂಘದ ಉಳಿತಾಯ ಖಾತೆಗೆ ಪ್ರತಿ ಸದಸ್ಯರು ನಿರ್ಧಾರಿತ ಹಣವನ್ನು ಜಮಾ ಮಾಡುವುದು, ಹಾಗೂ ಮುಂದಿನ ದಿನಗಳಲ್ಲಿ ಸಂಘದಿಂದ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು. ಇಂದಿನ ಸಭೆಯಲ್ಲಿ ಸಂಘದ ಅಧ್ಯಕ್ಷ ರಾಘವೇಂದ್ರ ಛಲವಾದಿ, ಉಪಾಧ್ಯಕ್ಷ ಮಂಜುನಾಥ ಪೂಜಾರ, ಮಹಿಳಾ ಉಪಾಧ್ಯಕ್ಷ ರೂಪಾ ಮಾದರ, ಸಂಘದ ಕಾನೂನು ಸಲಹೆಗಾರಾರು ಮಂಜುನಾಥ ಮಾದಾರ ಕೋಶಾಧಿಕಾರಿ ಗಣೇಶ ಪೂಜಾರ, ಕಾರ್ಯದರ್ಶಿ ಭರತ ಛಲವಾದಿ, ಸದಸ್ಯರಾದ ಮಲ್ಲಮ್ಮ ಮಾದರ, ರಾಜು ಮಾದರ ಹಾಗೂ ಸಂಘದ ಮಾರ್ಗದರ್ಶಕ ರಾಮಾಂಜನೇಯ ಮಾದರ,ಉಪಸ್ಥಿತರಿದ್ದರು.10 th , 12 th,ITI ಪಾಸಾದವರಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ/HAL India Recruitment 2022Share this:WhatsAppTwitterFacebookTelegramEmailPrintRelated News:
Leave a Comment