ಶ್ರೀಶಕ್ತಿಗೆ ಭಾರತ ಕಲಾರತ್ನ ಪ್ರಶಸ್ತಿ.October 8, 2022 by manjunath maadaar Leave a Commentಹಳಿಯಾಳ : ಬಿ. ಕೆ. ಹಳ್ಳಿ ಗ್ರಾಮದ ಕುಮಾರಿ ಶ್ರೀಶಕ್ತಿ ಅಶೋಕ ಮೇತ್ರಿ ಇವರು ಈಗಾಗಲೇ ಹಲವಾರು ಕಡೆ ನೃತ್ಯ ಪ್ರದರ್ಶನ ನೀಡಿದ್ದು, ತಮಿಳ್ನಾಡು ಪಾಂಡಿಚೇರಿ ಯಲ್ಲಿ ತಮ್ಮ 106 ನೇ ನೃತ್ಯ ಪ್ರದರ್ಶನ ನೀಡಿದರು. ಇವರ ಸಾಧನೆಯನ್ನು ಗಮನಿಸಿ ಗ್ಲೋಬಲ ಹುಮೆನ ಪೀಸ ಯೂನಿವರ್ಸಿಟಿ ಪಾಂಡಿಚೆರಿಯವರು ಬಾಲಕಿಗೆ ಭಾರತ ಕಲಾ ರತ್ನ-೨೦೨೨ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹಳಿಯಾಳದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದು,ಶ್ರೀ ದುರ್ಗಾ ನಾಟ್ಯ ಕಲಾ ಸಂಘ ನೃತ್ಯ ಶಾಲೆಯಲ್ಲಿ ಭರತನಾಟ್ಯ ವನ್ನು ಸುಮಾರು 6 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾರೆ. ಇವರ ಈ ಸಾಧನೆಯನ್ನು ಸಮಸ್ತ ಊರಿನ ಗುರು ಹಿರಿಯರು ಅಭಿನಂದಿಸಿದ್ದಾರೆ.Share this:WhatsAppTwitterFacebookTelegramEmailPrintRelated News:
Leave a Comment