ಕಾರವಾರ : 2022-23 ನೇ ಸಾಲಿನ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರವಾರ, ಶಿರಸಿ, ಭಟ್ಕಳ ತಾಲೂಕಿನ ಮೆಟ್ರಿಕ್ ನಂತರ ಬಾಲಕರ ಬಾಲಕೀಯರ ವಸತಿ ನಿಲಯದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ಕಡಿಮೆ ಇದ್ದು, ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಿರಸಿ ಬಾಲಕರ ವಸತಿ ನಿಲಯದಲ್ಲಿ 22, ಕಾರವಾರ ಬಾಲಕರ ವಸತಿ ನಿಲಯದಲ್ಲಿ 21 ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳು ಅವಶ್ಯವಿದ್ದು, ಭಟ್ಕಳ ಬಾಲಕರ ವಸತಿ ನಿಲಯದಲ್ಲಿ ಇತರೆ 10 ಮತ್ತು ಬಾಲಕಿಯರ ವಸತಿನಿಲಯದಲ್ಲಿ ಇತರೆ 10 ವಿದ್ಯಾರ್ಥಿಗಳು ಅವಶ್ಯಕವಾಗಿದ್ದು ಆಸಕ್ತ ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳು ವಸತಿನಿಲಯಕ್ಕೆ ಅಥವಾ ಜಿಲ್ಲಾ ಕಛೇರಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಿಲಯಪಾಲಕರ ದೂರವಾಣಿ ಸಂಖ್ಯೆ ಕಾರವಾರ 9844913378, ಶಿರಸಿ-9538717416, ಭಟ್ಕಳ-9844913378, ಮಾಹಿತಿ ಕೇಂದ್ರದ ದೂರವಾಣಿ ಸಂಖ್ಯೆ ಕಾರವಾರ-08382-225020, ಭಟ್ಕಳ-08385-224945, ಶಿರಸಿ 08384-298102 ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಛೇರಿ ದೂರವಾಣಿ ಸಂಖ್ಯೆ 08382-220336 ಗೆ ಸಂಪರ್ಕಿಸಿ ಎಂದು ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ಯಿಳಿಸಿದ್ದಾರೆ.
Leave a Comment