ಹೊನ್ನಾವರ:ತಾಲೂಕಿನ ಬಸ್ ನಿಲ್ದಾಣದ ಸಮೀಪ ಇಳಿಜಾರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಬ್ರೇಕ್ ಪೇಲ್ ಆಗಿದ್ದು, ಸರಣಿ ಅಫಘಾತ ಸಂಭವಿಸಿದ ಘಟನೆ ಇಂದು ಮಧ್ಯಾನ್ಹ ಸಂಭವಿಸಿದೆ.
ಅಫಘಾತದಲ್ಲಿ ಕಾರು, ಬೈಕ್ ಮತ್ತು ಎರಡು ಬಸ್ ಸೇರಿ ನಾಲ್ಕು ವಾಹನಗಳು ಜಖಂ ಗೊಂಡಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೇರಸೊಪ್ಪ ದಿಂದ ಬಸ್ ನಿಲ್ದಾಣಕ್ಕೆ ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಬಸ್ ನಲ್ಲಿರುವ ತಾಂತ್ರಿಕ ಧೋಷವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 6 ವಿಧ್ಯಾರ್ಥಿಗಳು ಸೇರಿ ಹದಿನೈದು ಜನಕ್ಕೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Leave a Comment