ಹಳಿಯಾಳ :ರಾಜ್ಯದಲ್ಲಿನ ರೈತರು ಕಳೆದ ಎರಡು ವರ್ಷಗಳಿಂದ ಕರೋನಾ ಹಾಗೂ ಅತಿವೃಷ್ಟಿಯಿಂದಾಗಿ ಸಂಕಷ್ಟದಲ್ಲಿದ್ದಾರೆ. ಆರ್ಥಿಕತೆಯನ್ನು ಅಪೇಕ್ಷಿಸುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸರಕಾರ ಕೂಡಲೇ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಬೇಕು ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್. ಆರ್. ಪಿ) ಹಾಗೂ ವಿಶೇಷ ಸಲಹಾ ಬೆಲೆ (ಎಸ್. ಎ. ಪಿ) ದರವನ್ನು ಪುನರ್ ಪರಿಶೀಲಿಸಿ ನಿಗದಿಪಡಿಸಬೇಕು. ಕಂಪನಿ ಪಡೆದಿರುವ ಕಟಾವು ಮತ್ತು ಸಾಗಾಣಿಕಾ ವೆಚ್ಚದ ಮಾಹಿತಿಯನ್ನು ಮತ್ತು ಕಟಾವು ಮತ್ತು ಸಾಗಾಣಿಕಾ (ಎಚ್ &ಟಿ ) ದರವನ್ನು ತರ್ಕಬದ್ಧವಾಗಿ ನಿಗದಿಪಡಿಸಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾನ್ಯ ಸಕ್ಕರೆ ಸಚಿವರು ಕಬ್ಬು ಬೆಳೆಗಾರರ ಮತ್ತು ಕಾರ್ಖಾನೆ ಪ್ರತಿನಿಧಿಗಳಿಗೆ ದಿನಾಂಕ 15-10-2022 ರಂದು ಸಭೆಯನ್ನು ಆಯೋಜಿಸಿದ್ದು, ಈ ಬಗ್ಗೆ ಮಾನ್ಯ ಸಕ್ಕರೆ ಸಚಿವರೊಂದಿಗೆ ರೈತರ ಸಮಸ್ಯೆಗಳ ಬಗ್ಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ರೈತರ ಪರವಾದ ನಿರ್ಧಾರಗಳು ಜಾರಿಗೆ ಬಂದು ಈ ಸಮಸ್ಯೆಗೆ ಪರಿಹಾರ ಸಿಗಲಿ ಎಂದು ಆಶಿಸುತ್ತೇನೆ ಎಂದು ಹಳಿಯಾಳ ಜೋಯಿಡಾ ಶಾಸಕ ಆರ್. ವಿ. ದೇಶಪಾಂಡೆ ಹೇಳಿದ್ದಾರೆ
ಹಳಿಯಾಳ
ವರದಿ : ಮಂಜುನಾಥ. ಹ. ಮಾದಾರ
14-10-2022
Leave a Comment