ಇಸ್ಲಾಮಾಬಾದ್ : ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ರಾಜಧಾನಿ ಹೈದರಾಬಾದ್ ನಲ್ಲಿ ಹಿಂದೂ ಸಮುದಾಯದ ಯುವತಿಯನ್ನು ಅಪಹರಿಸಲಾಗಿದೆ. 15 ದಿನಗಳ ಅವಧಿಯಲ್ಲಿ ಇದು 4ನೇ ಘಟನೆ ಪುತ್ರಿ ಮನೆಗೆ ವಾಪಾಸಾಗುತ್ತಿದ್ದಾಗ ಕಿಡಿಗೇಡಿಗಳು ಅಪಹರಿಸಿದ್ದಾರೆ ಎಂದು ಆಕೆಯ ತಂದೆ ಚಂದ್ರ ಮೆಹ್ರಾಜ್ ಹೇಳಿದ್ದಾರೆ.
ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು, ಇದುವರೆಗೆ ಆಕೆಯ ಬಗ್ಗೆಸುಳಿವು ಸಿಕಿಲ್ಲ. ಸೆ. 24 ರಂದು ಸಿಂದ್ ನ ಮಿರ್ ಪುರ್ ಕಾಶ್ ನಲ್ಲಿ ಬಾಲಕಿಯನ್ನು ಅಪಹರಿಸಲಾಗಿತ್ತು. ಮೊತ್ತೋಂದು ಪ್ರಕರಣದಲ್ಲಿ ರವಿ ಕುರ್ಮಿ ಎಂಬಾತನ ಪತ್ನಿಯನ್ನು ಅಪಹರಿಸಿ ಮತಾಂತರಗೊಳಿಸಿ, ಮುಸ್ಲಿಂ ಸಮುದಾಯದ ವ್ಯಕ್ತಿಗೆ ಮದುವೆ ಮಾಡಿಸಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ಪಾಕ್ ನಲ್ಲಿ ಸಂಸತ್ ನಲ್ಲಿ ಮಂಡಿಸಲು ಉದ್ದೇಶಿಸಿದ್ದ ಬಲವಂತದ ಮತಾಂತರ ತಡೆ ವಿಧೇಯಕ ತಿರಸ್ಕೃತಗೊಂಡಿತ್ತು.
Leave a Comment