ಯಲ್ಲಾಪುರ : ಇಲ್ಲಿನ ಯುವಕನೊಬ್ಬ ಹೊಸಪೇಟೆ ಯಲ್ಲಿ ರೈಲಿನಿಂದ ಆಯುತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
ಮೃತ ಯುವಕನನ್ನು ಸಬಗೇರಿ ಜಡ್ಡಿ ನಿವಾಸಿ ಗಿರೀಶ್ ಯಾಮಕೆ (24) ಎಂದು ಗುರುತಿಸಲಾಗಿದ್ದು, ಈತ ಹೊಸಪೇಟೆ ತೋರಣಗಲ್ ಜಿಂದಾಲ್ ಕಂಪನಿಯಲ್ಲಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. ಯಲ್ಲಾಪುರದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಯಲ್ಲಾಪುರ ತಾಲೂಕಾ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಫ್ರೌಢ ಶಿಕ್ಷಣವನ್ನು ಪೂರೈಸಿ. ನಂತರ ಐಟಿಐ ಮುಗಿಸಿಜಿಂದಾಲ್ ಕಂಪೆನಿಗೆ ಕೆಲಸಕ್ಕೆ ಸೇರಿದ್ದನು.
ತನ್ನ ಮನೆಯಾದ ಯಲ್ಲಾಪುರಕ್ಕೆ ರೈಲಿನಲ್ಲಿ ಬರುತ್ತಿದ್ದ ವೇಳೆ ಮಧ್ಯರಾತ್ರಿಯ ಬೋಗಿರ ಬಾಗಿಲಲ್ಲಿ ಆಯತಪ್ಪಿ ಕೆಳಗೆ ಬಿದ್ದು ತೀವ್ರ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ಪತ್ರೆಗೆ ತರುವ ಮುನ್ನವೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಈತನ ಆಕಸ್ಮಿಕ ಸಾವನ್ನು ಮಿತ್ರರಿಗೆ ಅರಗಿಸಿಕೊಳ್ಳಲಾಗದ ಸ್ಥಿತಿಯನ್ನು ನಿರ್ಮಾಣ ಮಡಿದೆ. ತಂದೆ ದೇವಪ್ಪ, ತಾಯಿ ಗೋದೇವಿ. ಓರ್ವ ಅಕ್ಕ ಓರ್ವ ಅಣ್ಣ ಹಾಗೂ ಅಪಾರ ಬಂಧು – ಮಿತ್ರರನ್ನು ಗಿರೀಶ ಆಗಲಿದ್ದಾನೆ.
ಗಿರೀಶ್ ಯಾಮಕೆ ಆಕಸ್ಮಿಕ ನಿಧನಕ್ಕೆ ಸಬಗೇರಿ ಪಟ್ಟಣ ಪಂಚಾಯಿತಿ ವಾರ್ಡ್ ಸದಸ್ಯ ರಾಜು ನಯ್ಕ ಹಾಗೂ ಸವಿತಾ ಸಮಾಜದ ತಾಲೂಕಾ ಅಧ್ಯಕ್ಷ ನಾಗರಾಜ ಯಾಮಕೆ ತೀವೃ ದುಃಖ ವೃಕ್ತಪಡಿಸಿದ್ದಾರೆ.
Leave a Comment