ಜಾನುವಾರುಗಳಲ್ಲಿ ಚರ್ಮಗಂಟು ರೋಗ/skin disease in cattle
ಹೆಸರೇ ಹೇಳುವಂತೆ ಜಾನುವಾರುಗಳಿಗೆ ವೈರಸ್ ನಿಂದ ಬರುವ ಸಾಂಕ್ರಾಮಿಕವಾದ ಈ ರೋಗದಲ್ಲಿ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ.ಈ ರೋಗ ತೀರ ಹೊಸದೇನಲ್ಲ.
ಇದು 1920ರ ದಶಕದಲ್ಲಿ ಆಫ್ರಿಕಾ ಖಂಡದಲ್ಲಿ ಮೊದಲು ಕಂಡು ಬಂದಿತ್ತು.2012ನೇ ಇಸವಿಯಿಂದ ಇತರ ಹಲವು ದೇಶಗಳಲ್ಲಿ ಹರಡಿದೆ. ಇದು ಆಕಳು, ಎಮ್ಮೆ, ಎತ್ತು ಮುಂತಾದ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತದೆ.ಭಾರತದಲ್ಲಿ ಮೊದಲು ಕಾಣಿಸಿದ್ದು 2019ರಲ್ಲಿ ಈಗ ದೇಶದಾದ್ಯಂತ ವೇಗವಾಗಿ ಹರಡುತ್ತಿದೆ.
ಕಚ್ಚುವ ನೊಣಗಳು, ಸೊಳ್ಳೆಗಳು, ಉಣ್ಣೆಗಳಿಂದ ಹಾಗೂ ರೋಗ ಬಂದ ಜಾನುವಾರುಗಳ ನೇರ ಸಂಪರ್ಕದಿAದಲೂ ಇದು ಹರಡುತ್ತದೆ. ಹಸು ಒಮ್ಮೆ ಸೋಂಕಿತಗೊAಡರೆ 4-14 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಅತಿಯಾದ ಜ್ವರ, ಮೂಗು ಮತ್ತು ಕಣ್ಣಿನಲ್ಲಿ ನೀರು ಸೋರುವುದು, ಹೆಚ್ಚು ಜೊಲ್ಲು ಸೋರುವುದು, ನಂತರದಲ್ಲಿ ಮೈಮೇಲೆ 2-5 ಸೆಂಮೀ ಗಾತ್ರದ ಗಂಟುಗಳು ಏಳುತ್ತವೆ.ಇವು ನೋವಿನಿಂದ ಕೂಡಿದ್ದು ಕ್ರಮೇಣ ಕೀವು ತುಂಬಿಕೊಳ್ಳುತ್ತದೆ. ರಾಸು ಎದ್ದೇಳಲೂ ಕಷ್ಟಪಡಬಹುದು.
ಜಾನುವಾರುಗಳಲ್ಲಿ ಚರ್ಮಗಂಟು ರೋಗ/skin disease in cattle
ಹಾಗೆಯೇ ಬಿಟ್ಟರೆ ಬ್ಯಾಕ್ಟಿರಿಯಾಗಳಿಂದ ಸೋಂಕು ಉಂಟಾಗಿ ಗಂಟುಗಳುಒಡೆದು ಗಾಯದಲ್ಲಿ ಕೀವು ಸೋರತೊಡಗುತ್ತದೆ. ಕ್ರಮೇಣ ಇವು 10-15 ದಿನಗಳಲ್ಲಿ ಒಣಗಿ ಸಿಪ್ಪೆಯಂತೆ ಮೇಲೇಳತೊಡಗಬಹುದು, ಶೀಘ್ರದಲ್ಲಿ ಚಿಕಿತ್ಸೆ ದೊರೆತರೆ ಈ ಗಂಟುಗಳು ಒಡೆಯದೇ ಗುಣವಾಗುತ್ತ ಬರುತ್ತವೆ. ಈ ರೋಗದಲ್ಲಿ ಮರಣದ ಪ್ರಮಾಣ ಕಡಿಮೆಯೇ.ಆದರೂ ಜಾನುವಾರು ಬಡಕಲಾಗುತ್ತದೆ. ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಗರ್ಭಧರಿಸಿದ ರಾಸುಗಳು ಕಂದು ಹಾಕಬಹುದು.
ಈ ರೋಗ ಲಕ್ಷಣ ಕಂಡ ತಕ್ಷಣ ಇಂತಹ ಜಾನುವಾರುಗಳಿಂದ ಬೇರ್ಪಡಿಸಿ ಚಿಕಿತ್ಸೆ ಕೊಡಿಸಬೇಕು. ಸೊಳ್ಳೆ ನೋಣ, ಉಣುಗುಗಳು ಕಚ್ಚದಂತೆ ನೋಡಿಕೊಳ್ಳಬೇಕು. ಫಿನೈಲ್ ಫಾರ್ಮಾಲಿನ್, ಸೋಡಿಯುಮ್ ಹೈಪೋಕ್ಸೋರೈಟ್ ನಂತಹ ಔಷಧಗಳನ್ನು ಕೊಟ್ಟಿಗೆಗೆ ಆಗಾಗ ಸಿಂಪಡಿಸುವುದರಿAದ ವೈರಾಣುಗಳು ನಾಶ ಹೊಂದುತ್ತವೆ. ರಾಸುಗಳು ಮೈಗೆ ಬೇವಿನ ಎಣ್ಣೆ, ಹೊಂಗೆ ಎಣ್ಣೆ, ಗೊಂಡೆ ಹೊವಿನ ರಸ, ಅಥವಾ ಸೀತಾಫಲ ಎಲೆಗಳ ರಸ ಲೇಪಿಸುವುದರಿಂದ ಉಣುಗು ನೊಣಗಳ ಕಾಟ ತಪ್ಪಿಸಬಹುದು.
ಜಾನುವಾರುಗಳಲ್ಲಿ ಚರ್ಮಗಂಟು ರೋಗ/skin disease in cattle
ಸೈಪರ್ಮೆಥ್ರಿನ್, ಡೆಲ್ಟಾಮೆಥ್ರಿನ್, ಅಮಿಟ್ರಾಜ್ ನಂತಹ ರಾಸಾಯನಿಕ ಔಷಧಿಗಳನ್ನು ಕೂಡ ಬಳಸಬಹುದು. ಈ ರೋಗ ಕಂಡುಬAದ ಪ್ರದೇಶದಿಂದ ರಾಸುಗಳನ್ನು ಖರೀದಿಸಬಾರದು. ಇದು ವೈರಾಣುನಿಂದ ಬರುವ ರೋಗವಾದ್ದರಿಂದ ಯಾವುದೇ ನಿರ್ದಿಷ್ಟ ಚಿಕಿತ್ಸ್ ಇಲ್ಲದಿದ್ದರೂ ರೋಗ ಲಕ್ಷಣಗಳಿಗುಣವಾಗಿ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿದರೆ ಶೀಘ್ರದಲ್ಲಿ ಗುಣ ಕಾಣುತ್ತದೆ. ಮನೆಮದ್ದಾಗಿ ಮತ್ತು ವೀಳ್ಯದೆಲೆ, ಹತ್ತು ಗ್ರಾಂ ಕಾಳು ಮೆಣಸು ಮತ್ತು ಹತ್ತು ಗ್ರಾಂ ಉಪ್ಪು ಸೇರಿಸಿ ಅರೆದು ಬೆಲ್ಲದೊಂದಿಗೆ ಕುಡಿಸುತ್ತ ಬರಬಹುದು. ಈ ರೋಗಕ್ಕೆ ಪ್ರತಿಬಂಧಕವಾಗಿ ಮೇಕೆಪಾಕ್ಸ್ ಲಸಿಕೆ ಚಚ್ಚುಮದ್ದು ಲಭ್ಯವಿದೆ. ಈ ರೋಗ ಮನುಷ್ಯರಿಗೆ ಹರಡುವುದಿಲ್ಲ.
ಸುಮಾರು ಎರಡು ವರ್ಷಗಳ ಹಿಂದೆ ಮೊದಲ ಬಾರಿಗೆ ಜಾನುವಾರುಗಳಲ್ಲಿ ಕಂಡುಬAದ ಲಂಪಿಸ್ಕಿನ್ (ಷರ್ಮಗಂಟು) ರೋಗ ಈಗ ಮತ್ತೆ ಎದುರಾಗಿದ್ದರಿಂದ ಹೈನುಗಾರರು ಎಚ್ಚರ ವಹಿಸಬೇಕು.
Leave a Comment