ಅಂಕೋಲಾ : ಇಲ್ಲಿನ ಪಿಎಸೈ ಪ್ರವೀಣಕುಮಾರ ಅವರ ಹೆಸರು ಹಾಗೂ ಫೊಟೊ ಬಳಸಿಕೊಂಡು ನಕಲಿ ಇನ್ ಸ್ಟಾಗ್ರಾಂ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.
ಪ್ರವೀಣಕುಮಾರ ಪಿ ಎಸೈ ಎಂಬ ಹೆಸರಿನಲ್ಲಿ ನಕಲಿ ಇನ್ ಸ್ಟಾಗಾಂ ಖಾತೆ ಸೃಷ್ಟಿಸಿ, ಅವರ ಸ್ನೇಹಿತರಿಗೆ, ಪರಿಚಯಸ್ಥರಿಗೆ ಮೇಸೇಜ್ ಕಳುಹಿಸಿ, ತಮಗೆ ತುರ್ತಾಗಿ ಹಣಬೇಕೆಂದು ಅನೇಕರಿಗೆ ಹಣ ಕೇಳಿದ್ದಾರೆ.
ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ ವಿನಂತಿಸುತ್ತಿದ್ದಾರೆ. ವಂಚಕರಿAದ ಸಂದೇಶ ಸ್ವೀಕರಿಸಿದ ಸ್ನೇಹಿತರು ಪ್ರವೀಣ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ನನ್ನ ಹೆಸರು ಮತ್ತು ಪೋಟೋ ಬಳಸಿ ಯಾರೋ ಇನ್ ಸ್ಟಾಗ್ರಾಂ ನಕಲಿ ನಕಲಿ ಖಾತೆ ತೆರೆದು ಸಾರ್ವಜನಿಕರಲ್ಲಿ ಹಣ ಕೇಳುತ್ತಿರುವುದು ಕಂಡುಬAದಿದೆ. ಯಾರು ಕೂಡ ಹಣ ಕಳುಹಿಸಬೇಡಿ ಎಂದು ಪಿಎಸೈ ಪ್ರವೀಣಕುಮಾರ ಅವರು ಮನವಿ ಮಾಡಿದ್ದಾರೆ.
Leave a Comment