ಹೊನ್ನಾವರ: ಮಹಿಳೆಯೋರ್ವಳ ಮಂಗಳಸೂತ್ರವನ್ನು ಕದ್ದೊಯ್ದಿದ್ದ ಇಬ್ಬರು ಆರೋಪಿಗಳಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಿ ಇಲ್ಲಿನ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ವಿವರ ಯಲ್ಲಾಪುರದ ನಾಸಿರ್ ಅಹಮದ್ ಹಾಗೂ ಭಟ್ಕಳದ ಅಬ್ದುಲ್ ಅಲಿಂ ಎನ್ನುವ ಇಬ್ಬರು ಯುವಕರು 2020 ಜುಲೈ 2ರಂದು ರಾಷ್ಟ್ರೀಯ ಹೆದ್ದಾರಿಯ ಮೇಲೆ ತಮ್ಮ ಬೈಕ್ ಮೂಲಕ ಬಂದು ಪಟ್ಟಣದ ಬಜಾರ್ ರಸ್ತೆಯಿಂದ ಎಮ್ಮೆ ಪೈಲ್ ಕಡೆಗೆ ಹೆದ್ದಾರಿ ದಾಟುತ್ತಿದ್ದ ಪೂರ್ಣಿಮಾ ನಾಯ್ಕ ಎಂಬುವವರ ಮಂಗಳಸೂತ್ರವನ್ನು ಕಿತ್ತೊಯ್ದಿದ್ದರು. ಈ ಕುರಿತು ಪೂರ್ಣಿಮಾ ಹೊನ್ನಾವರ ಪೊಲೀಸರಿಗೆ ದೂರು ನೀಡಿದ್ದಳು. ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿದ್ದರು.
ಆಗಿನ ಪೊಲೀಸ್ ವೃತ್ತ ನಿರೀಕ್ಷಕ ವಸಂತ ಆಚಾರಿ ಆರೋಪಿಗಳನ್ನು ಪತ್ತೆ ಮಾಡಿ, ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಜೆಎಂಎಫ್ ಸಿ ನ್ಯಾಯಾಧೀಶರಾದ ಕುಮಾರ ಜಿ. ಅವರು 10 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ವಕೀಲರಾದ ಸಂಪದಾ ಗುನಗಾ ವಾದಿಸಿದ್ದರು.
Leave a Comment