ಹೊನ್ನಾವರ : ಪ್ರಧಾನ ಮಂತ್ರಿ ಜನರೋಗ್ಯ ಯೋಜನೆಯಡಿ ನೋಂದಣಿ ಮಾಡುತ್ತಿರುವ ಆಭಾ ಕಾರ್ಡ್ ಅನ್ನು ಖಾಸಗಿ ಆನ್ಲೆöÊನ್ ಅವಕಾಶ ನೀಡಿಲ್ಲವಾದರೂ ಹೆಲ್ತ್ ಐಡಿ ಮಾಡಿ ಜನರಿಂದ 50-60 ರೂಪಾಯಿಯವರೆಗೆ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಗ್ರಾಮ ಒನ್ ಕೇಂದ್ರದಲ್ಲಿ ಸೆಂಟರ್ ಗಳು ಜನರ ದಿಕ್ಕು ತಪ್ಪಿಸಿ ಖಾಸಗಿ ಹೆಲ್ತ್ ಐಡಿ ಮಾಡಿ ಹಣ ಪೀಕುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ನೋಂದಾಣಿಗೆ ಗ್ರಾಮ ಒನ್ ಹಾಗೂ ಎಸ್ ಕೆಡಿಆರ್ ಡಿಪಿ ಸಾಮಾನ್ಯ ಸೇವಾ ಕೇಂದ್ರ ಕ್ಕೆ ಹೊರತುಪಡಿಸಿ ಬೇರೆ ಯಾವುದಕ್ಕೂ ನೋಂದಣಿಗೆ ವಿತರಿಸುವ ಕಾರ್ಡ್ಗಳು ಯಾವುದೇ ಮೌಲ್ಯ ಹೊಂದಿಲ್ಲ ಎಂದು ಹೇಳಿ ಜರನ್ನು ದಿಕ್ಕು ತಪ್ಪಿಸುವ ಕೆಲಸ ಸಾಗುತ್ತಿದೆ.
ಆರೋಗ್ಯ ಕಾರ್ಡ್ ಗಳ ಬಗ್ಗೆ ಜನರಲ್ಲಿರುವ ಗೊಂದಲದಿAದ ಆಯೂಷ್ಮಾನ್ ಕಾರ್ಡ್ಗಳ ನೋಂದಾಣಿಯಲ್ಲಿ ಜಿಲ್ಲೆಯ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎನ್ನುವುದು ಅಪರೇಟರ್ಗಳವಾದ. ಒಂದಡೆ ಕೈಕೊಡುವ ಸರ್ವರ್ ಇನ್ನೊಂದೆಡೆ ಖಾಸಗಿ ಆನ್ಲೆöÊನ್ ಸೆಂಟರ್ಗಳು ಹೆಲ್ತ್ ಐಡಿ ಕಾರ್ಡ್ ಕೊಟ್ಟು ಇದನ್ನೇ ಅಭಾ ಕಾರ್ಡ್ ಎಂದು ಜನರಿಗೆ ವಂಚಿಸಿ ಹಣ ವಸೂಲಿ ಮಾಡಿ ದಿಕ್ಕು ತಪ್ಪಿಸುತ್ತಿದ್ದಾರೆ.
ಹೆಲ್ತ್ ಐಡಿ ಮಾಡಿಕೊಂಡಿರುವ ನಾಗರಿಕರು ಅದನ್ನೇ ಅಭಾ ಕರ್ಡ್ ಎಂದು ನಂಬಿ ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳದೇ ಇರುವುದು ಕೂಡ ಪ್ರಮುಖ ಕಾರಣವಾಗಿದೆ.
ಕ್ರಮ ಕೈಗೊಳ್ಳದ ಅಧಿಕಾರಿಗಳು : ಖಾಸಗಿ ಆನ್ಲೆöÊನ್ ಸೆಂಟರ್ಗಳು ತಮ್ಮ ಅಂಗಡಿಯ ಫಲಕಗಳಿಗೆ ಸರ್ಕಾರದ ಲೋಗೋ ಬಳಸಿರುವುದು ಹಾಗೂ ಗ್ರಾಮ ಒನ್ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಕೆಲವು ಗ್ರಾಮ ಒನ್ ಫ್ರಾಂಚೈಸಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಮನವಿ ಮಾಡಿದ್ದರೂ ಅಂಥವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಸರ್ಕಾರದ ಯೋಜನೆಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಹುಟ್ಟಿಸುವವರ ಅಧಿಕಾರ ಮಾರ್ಗ ಸುಮ್ಮನೆ ಕುಳಿತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದೆ.
ಕುಟುAಬ ಸರ್ವರ್ ನಲ್ಲಿ ಮಾಹಿತಿ ಮಾಯ!
ಅಭಾ ಕಾರ್ಡ್ ನೋಂದಾಣಿ ಮಾಡಿಸಿಕೊಳ್ಳುವಾಗ ಅವರ ಹೆಸರು ಪಡಿತರ ಚೀಟಿಯಲ್ಲಿ ಕಡ್ಡಾಯವಾಗಿ ಇರಬೇಕು ಹಾಗೂ ಮಾಹಿತಿ ಕುಟುಂಬ ಸರ್ವರ್ನಲ್ಲಿ ಅಪ್ಡೇಟ್ ಆಗಿರಬೇಕು. ಜಿಲ್ಲೆಯ ಆದೆಷ್ಟೂ ನಾಗರಿಕರ ಮಾಹಿತಿ ಈವರೆಗೆ ಕುಟುಂಬ ಸರ್ವರ್ ನಲ್ಲಿ ಅಪ್ಡೇಟ್ ಆಗಿಲ್ಲ. ಅವರ ಮಾಹಿತಿಯನ್ನು ಭರ್ತಿ ಮಾಡಲು ಗ್ರಾಮ ಒನ್ ಫ್ರಾಂಚೈಸಿದಾರರಿಗೆ ಲಿಂಕ್ ನೀಡಿದ್ದಾರೆ.
ಆದರೆ ಮಾಹಿತಿ ತುಂಬಿದ ಒಂದು ತಿಂಗಳು ಕಳೆದರೂ ಕೂಡ ಅವರ ಹೆಸರು ಮಾತ್ರ ಸರ್ವರ್ ನಲ್ಲಿ ಅಪ್ಡೇಟ್ ಆಗುತ್ತಿಲ್ಲ. ಇದರಿಂದ ನಾಗರಿಕರಿಂದ ಗ್ರಾಮ ಒನ್ ಪ್ರಾಂಚೈಸಿದಾರರು ಹೇಳಿಸಿಕೊಳ್ಳುವ ಸ್ಥಿತಿ ಬಂದೊದಗಿದೆ.
Leave a Comment