ಶಿರಸಿ: ತಾಲೂಕಿನ ಲಾಲಗೌಡನಗರದ ಅಕೇಶಿಯಾ ಪ್ಲಾಂಟೇಶನ್‌ನಲ್ಲಿ ಆಡುತ್ತಿದ್ದ ತಂಡದ ಮೇಲೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ 14 ಜನರನ್ನು ಬಂಧಿಸಿ ಆರೋಪಿತರಿಂದ 64,200 ರೂ. ವಶಕ್ಕೆ ಪಡೆದ ಪ್ರಸಂಗ ನಡೆದಿದೆ.
ತಾಲೂಕಿನ ಗ್ರಾಮೀಣ ಠಾಣಾ ವ್ಯಾಪ್ತಿಯ ಅಕೇಶಿಯಾ ಪ್ಲಾಂಟೇಶನ್ ನಲ್ಲಿ ಶಿರಸಿ ಗ್ರಾಮೀಣ ಠಾಣೆಯ ಪಿಎಸ್ ಐ., ಡಿ.ಎನ್.ಈರಯ್ಯ ನೇತೃತ್ವದಲ್ಲಿ ದಾಳಿ ನಡೆಸಿ 14 ಜನ ಆರೋಪಿತರನ್ನು ಬಂಧಿಸಲಾಯಿತು. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment