ಕುಮಟಾ: ತಾಲೂಕಿನ ವಿವಿಧೆಡೆ ನಡೆದ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿದ ಕುಮಟಾ ಠಾಣೆ ಪೊಲೀಸರು ಐದು ಪ್ರತ್ಯೇಕ ಪ್ರಕರಣ ದಾಖಲಿಸಿ, 32 ಮಂದಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜೂಟಾಟ ಜೋರಾಗಿದ್ದು, ಇದನ್ನು ನಿಯಂತ್ರಿಸಲು ಕುಮಟಾ ಠಾಣೆ ಪಿಎಸ್‌ಐ ರವಿ ಗುಡ್ಡಿ ನೇತೃತ್ವದ ತಂಡ ತಾಲೂಕಿನಾದ್ಯಂತ ವಿವಿಧ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿತ್ತು.
ಕುಮಟಾ ತಾಲೂಕಿನ ಹೆಗಡೆಯ ಜೋಡಕೆರೆಯಲ್ಲಿ ದಾಳಿ ನಡೆಸಿ ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಿ, 1,420 ರೂ ಜಪ್ತಿ ಪಡಿಸಿಕೊಂಡಿದ್ದಾರೆ.
ಮಿರ್ಜಾನ್ ಬಳಿ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, 1,810 ರೂ, ಬಾಡ ಹುಬ್ಬಣಗೇರಿಯ ಕಲ್ಕಟ್ಟ ರಸ್ತೆಯಲ್ಲಿ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿ 4,820 ರೂ, ಕಡ್ಲೆ ಮೈದಾನದ ಬಳಿ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, 3,150 ರೂ ಮತ್ತು ಅಳ್ವೆಕೋಡಿ ಜಟಗೇಶ್ವರ ದೇವಸ್ಥಾನ ಬಳಿ 9 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಅವರ ಬಳಿ ದೊರೆತ 5,180 ರೂ . ಸೇರಿದಂತೆ ಜೂಟಾಟದ ಪರಿಕರಗಳನ್ನು ಜಫ್ತು ಮಾಡಿದ್ದಾರೆ. ಒಟ್ಟು ಐದು ಪ್ರಕರಣದಲ್ಲಿ 32 ಮಂದಿಯ ವಿರುದ್ಧ ಕಾನೂನು ಕ್ರಮ ಕೈಗೊಂಡ ಪೊಲೀಸರು ,16,380 ರೂ ಗಳನ್ನು ವಶಪಡಿಸಿಕೊಂಡಿದ್ದಾರೆ.
Leave a Comment