ಇಲಾನ್ ಮಸ್ಕ್ ಅವರು ಟ್ವೀಟರ್ ಕಂಪನಿಯನ್ನು ಖರೀದಿಸಿದ ಬಳಿಕ ಮೊದಲ ಸುತ್ತಿನಲ್ಲಿ ಶೇಕಡ 25 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಕಂಪನಿ ಮುಂದಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ವರದಿಯ ಪ್ರಕಾರ, ಮಸ್ಕ್ ಅವರ ಕಾನುನು ಸಲಹೆಗಾರ ಅಲೆಕ್ಸ್ ಸ್ಪಿರೂ ಅವರು ಈ ಉದ್ಯೋಗ ಕಡಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಷೇರುಪೇಟೆಯಲ್ಲಿ ಇರುವ ಮಾಹಿತಿಯ ಪ್ರಕಾರ 2021 ರ ಅಂತ್ಯಕ್ಕೆ ಟ್ವೀಟರ್ ನಲ್ಲಿ 7 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಇದ್ದಾರೆ. ಇವರಲ್ಲಿ ಶೇ 25 ರಷ್ಟು ಅಂದರೆ ಸುಮಾರ 2 ಸಾವಿರ ಉದ್ಯೋಗಿಗಳನ್ನು ಕಂಪನಿ ಮನೆಗೆ ಕಳುಹಿಸಲಿದೆ.
ಈ ಕುರಿತು ಟ್ವೀಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿಬ್ಬಂದಿ ಕಡಿತದ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಇಲಾನ್ ಮಸ್ಕ್ ನಿರಾಕರಿಸಿದ್ದಾರೆ.
Leave a Comment