ಇನ್ಸ್ಟಾಗ್ರಾಮ್ ಲವ್ : ಹಾರಿಸಿಕೊಂಡು ಹೋಗಲು ಬಂದವಗೆ ಧರ್ಮದೇಟು;
ಕುಮಟಾ : ಉತ್ತರಪ್ರದೇಶ ಮೂಲದ ಇಬ್ಬರು ಯುವಕರು ಸಾಮಾಜಿಕ ಜಾಲತಾಣದ ಮೂಲಕ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಕೆಲವು ಆಮಿಷಗಳನ್ನು ತೋರಿಸಿ, ಪ್ರೀತಿಸುವ ನಾಟಕವಾಡಿ, ಕಿಡ್ನಾಪ್ ಗೆ ಯತ್ನಿಸಿ ಸ್ಥಳೀಯರಿಂದ ಧರ್ಮದೇಟು ತಿಂದ ಪ್ರಸಂಗ ನಡೆದಿದೆ.
ಈ ಇಬ್ಬರು ಯುವತಿಯ ಅಪಹರಣಕ್ಕೆ ಯತ್ನಿಸುತ್ತಿದ್ದಾಗ ಬಗ್ಗೋಣದ ನಾಗರಿಕರು ಅನುಮಾನಗೊಂಡು ಅವರನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಯುವಕರು ಬೈಕ್ ಮೇಲೆ ಆಗಮಿಸಿ, ಬಗ್ಗೋಣದ ರಸ್ತೆಯಲ್ಲಿ ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸುತ್ತಿದ್ದರು. ಸ್ಥಳೀಯ ಕೆಲವರು ಅನುಮಾನಗೊಂಡು ವಿಚಾರಿಸಿದಾಗ, ಉತ್ತರಪ್ರದೇಶದಿಂದ ಯುವಕರು ವಿದ್ಯಾರ್ಥಿಯನ್ನು ಬೇಟಿಯಾಗಿ ಅಪಹರಣಕ್ಕೆ ಹೊಂಚು ಹಾಕುತ್ತಿರುವುದನ್ನು ತಿಳಿದು ಇಬ್ಬರು ಯುವಕರಿಗೂ ಧರ್ಮದೇಟು ನೀಡಿದ್ದಾರೆ.
ಇನ್ಸ್ಟಾಗ್ರಾಮ್ ಲವ್ : ಹಾರಿಸಿಕೊಂಡು ಹೋಗಲು ಬಂದವಗೆ ಧರ್ಮದೇಟು
ತಾಲೂಕಿನ ಪ್ರತಿಷ್ಠತ ವಿದ್ಯಾ ಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ ಹಾಗೂ ಉತ್ತರ ಪ್ರದೇಶ ಮೂಲದ ಮುಸ್ಲಿಮ್ ಧರ್ಮೀಯ ಯುವಕನ ನಡುವೆ ಇನ್ಸಾ÷್ಟಗ್ರಾಮ್ ಮೂಲಕ ಅತಿಯಾದ ಪ್ರೇಮ ಬೆಳೆದಿತ್ತು ಎನ್ನಲಾಗಿದೆ.
ಪ್ರೀತಿಯ ನೆಪದಿಂದ ಭೇಟಿಯಾಗಲು ಉತ್ತರಪ್ರದೇಶದಿಂದ ಕುಮಟಾಕ್ಕೆ ಆಗಮಿಸಿದ ಯುವಕ ಸ್ಥಳೀಯ ಯುವಕನೊಬ್ಬನ ಜೊತೆ ಬೈಕ್ ಮೇಲೆ ಬಂದು, ವಿದ್ಯಾರ್ಥಿನಿ ಶಾಲೆ ಮುಗಿಸಿ ಟ್ಯೂಷನ್‌ಗೆ ತೆರಳುತ್ತಿರುವ ವೇಳೆ ಭೇಟಿಯಾದ. ಯುವಕ ಯುವತಿ ಇಬ್ಬರೂ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ಕಥೆ ತೆರೆದುಕೊಂಡಿದೆ.
ಹಿಂದಿಯಲ್ಲಿ ಮಾತನಾಡುತ್ತಿದ್ದ ಯುವಕರನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ಉತ್ತರಪ್ರದೇಶ ಮೂಲದವರು ಎಂಬ ಮಾಹಿತಿ ಲಭಿಸಿ, ಸುದ್ದಿ ಕಾಡಿಚ್ಚಿನಂತೆ ಪಸರಿಸಿ, ಸ್ಥಳೀಯರೆಲ್ಲರೂ ಸೇರಿಕೊಂಡು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ಸ್ಟಾಗ್ರಾಮ್ ಲವ್ : ಹಾರಿಸಿಕೊಂಡು ಹೋಗಲು ಬಂದವಗೆ ಧರ್ಮದೇಟು
ಇಬ್ಬರು ಯುವಕರನ್ನು ಠಾಣೆಗೆ ಕರೆದೊಯ್ದು ಪಿಐ ತಿಮ್ಮಪ್ಪ ನಾಯ್ಕ, ಪಿಎಸ್‌ಐಗಳಾದ ನವೀನ ನಾಯ್ಕ, ರವಿ ಗುಡ್ಡಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಕೇಸ್ ದಾಖಲಾಗಿಲ್ಲ
ಉತ್ತರ ಪ್ರದೇಶದಿಂದ ಆಗಮಿಸಿ, ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ಜತೆ ಅಸಭ್ಯ ವರ್ತನೆ ನಡೆಸಿದ ಯುವಕರನ್ನು ಠಾಣೆಗೆ ಕರೆದು ವಿಚಾರಿಸಲಾಗಿದೆ. ಅಪ್ರಾಪ್ತೆಯಾದ ಕಾರಣ ಪಾಲಕರನ್ನು ಕರೆದು ಬುದ್ದಿವಾದ ಹೇಳಲಾಗಿದೆ. ಯುವಕರಿಗೆ ವಾರ್ನಿಂಗ್ ನೀಡಿ ಊರಿಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Leave a Comment