ಸಹೋದರರ ಜಗಳ;ಕೊಲೆಯಲ್ಲಿ ಅಂತ್ಯ
ಹೊನ್ನಾವರ: ಸಹೋದರರ ನಡುವೆ ಆಸ್ತಿ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡು ಕೊಲೆಯಲ್ಲಿ ಅಂತ್ಯವಾದ ಘಟನೆ ನಿಕ್ಕೋಡ ಸಮೀಪದ ತೊಟ್ಟಿಲಗುಂಡಿಯಲ್ಲಿ ನಡೆದಿದೆ.
ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನುವಂತೆ ಮನೆಯ ಆಸ್ತಿ ವಿಷಯಕ್ಕೆ ಆಗಾಗ ಸಹೋದರರ ನಡುವೆ ನಡೆಯುತ್ತಿದ್ದ ಜಗಳ ಶನಿವಾರ ವಿಕೋಪಕ್ಕೆ ತೆರಳಿದೆ. ಮೊದಲಿಗೆ ಮಾತಿಗೆ ಮಾತು ಬೆಳೆದು ಕೈ ಕೈಮಿಲಾಯಿಸಿಕೊಂಡು ವಿನಾಯಕ ಮತ್ತು ಚಿದು ಎನ್ನುವವರು ಅಣ್ಣನಾದ ಹನುಂಮತ ಎನ್ನುವವ ಮೇಲೆ ಕಬ್ಬಿಣದ ರಾಡ್ ಬಳಸಿ ಹಲ್ಲೆ ನಡೆಸಿದ್ದಾರೆ.
ತಲೆ ಭಾಗಕ್ಕೆ ಗಂಭೀರವಾಗಿ ಗಾಯವಾದ ಪ ರಿಣಾ ವ ಹನುಮಂತ ನಾಯ್ಕ (54) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಮೃತರ ಸೋದರ ಮಾವ ನಾಯರ್ (70) ಗೆ ಗಂಭೀರ ಗಾಯಗೊಂಡಿದ್ದಾರೆ.
ಹಲ್ಲೆ ಮಾಡಿ ಕೊಲೆಗೆ ಕಾರಣರಾದ ವಿನಾಯಕ ನಾಯ್ಕ, ಚಿದಾನಂದ ನಾಯ್ಕ ಪತ್ತೆಗೆ ಹೊನ್ನಾವರ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Leave a Comment