ಎಂ ಇ ಎಸ್ ವಾಣಿಜ್ಯ ಕಾಲೇಜ್ ಶೇ.100 ಸಾಧನೆ
ಶಿರಸಿ: ಅಗಷ್ಟ 2022 ರಲ್ಲಿ ಜರುಗಿದ ಎಂ.ಕಾಂ 4 ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶಿರಸಿಯ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ ಶೇ. 100 ಆಗಿರುತ್ತದೆ.
ಪರೀಕ್ಷೆಗೆ ಒಟ್ಟೂ 35 ವಿದ್ಯಾರ್ಥಿಗಳು ಕುಳಿತಿದ್ದು ಎಲ್ಲ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಾಲೇಜಿಗೆ ಕುಮಾರಿ ಪೂಜಾ ದತ್ತಾತ್ರೇಯ ಭಂಡಾರಿ (ಶೇ.72.6) ಪ್ರಥಮ ಸ್ಥಾನ, ಕುಮಾರಿ ಚೈತ್ರಾ ಪಂಜು ಬಿಲ್ಲವ (ಶೇ.71.8) ದ್ವಿತೀಯ ಸ್ಥಾನ, ಕುಮಾರಿ ಸ್ನೇಹಾ ಪೂಜಾರಿ (ಶೇ.71) ಹಾಗೂ ಕುಮಾರ ವೇಣುಕುಮಾರ ನಾಗರಾಜ ಶೆಟ್ಟಿ (ಶೇ.71) ತೃತೀಯ ಸ್ಥಾನ ಪಡೆದಿದ್ದಾರೆ.
Leave a Comment