ನ್ಯಾಯಾಲಯಕ್ಕೆ ಶರಣಾದ ಕೊಲೆ ಆರೋಪಿಗಳು
ಹೊನ್ನಾವರ: ತಾಲೂಕಿನ ಅರೇಅಂಗಡಿಯ ತೊಟ್ಟಿಲಗುಂಡಿಯಲ್ಲಿ ಆಸ್ತಿ ವಿಷಯಕ್ಕೆ ನಡೆದ ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳು ನ್ಯಾಯಲಯದ ಮುಂದೆ ಶರಣಾಗಿದ್ದಾರೆ.
ನ.5 ರಂದು ಆಸ್ತಿ ವಿಷಯಕ್ಕೆ ಸಹೋದರರ ನಡುವೆ ನಡೆದ ಕಲಹದಲ್ಲಿ ಹನುಮಂತ ನಾಯ್ಕ ಮೃತಪಟ್ಟು, ಮಾರುತಿ ನಾಯ್ಕ ತೀವ್ರ ಗಾಯಗೊಂಡು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದರು.
ಘಟನೆ ನಡೆದ ಮಾರನೇ ದಿನವೇ ಘಟನೆಗೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿ ಹೊಸಾಕುಳಿಯ ಮಂಜುನಾಥ ಮುಕ್ರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಪ್ರಮುಖ ಆರೋಪಿಗಳ ಪತ್ತೆಗಾಗಿ ಅರೇಅಂಗಡಿಯ ಸುತ್ತಮುತ್ತ ಪ್ರದೇಶ ಮತ್ತು ಚಿಕ್ಕನಕೋಡ ಗ್ರಾಮದ ವಿವಿಧೆಡೆ ಶೋಧ ಕಾರ್ಯ ನಡೆಸಿದ್ದರು.
ಬುಧವಾರ ಮುಂಜಾನೆ ಆರೋಪಿಗಳಾದ ತೊಟ್ಟಿಲಗುಂಡಿಯ ಮೃತರ ಸಹೋದರರಾದ ವಿನಾಯಕ ನಾಯ್ಕ, ಚಿದಂಬರ ನಾಯ್ಕ ಹಾಗೂ ಜನಕಡ್ಕಲ್ ಮೂಲದ ಮಂಜುನಾಥ ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ.
Leave a Comment