ಕೌಶಲ್ಯ ತರಬೇತಿಗೆ ಅರ್ಜಿ ಅಹ್ವಾನ/ Application Invitation for Skill Training
ಕಾರವಾರ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ನ್ಯಾಷನಲ್ ಅಕಾಡೆಮಿ ಫಾರ್ ಸ್ಕಿಲ್ ಡೆವಲಪ್ಟೆಂಟ್ ದಾಂಡೇಲಿಯಲ್ಲಿ ಸಿ.ಎಮ್. ಕೆ.ಕೆ.ವೈ ಯೋಜನೆಯಡಿ ಐಟಿಐ, ಡಿಪ್ಲೋಮಾ, ಬಿಇ ವಿದ್ಯಾರ್ಹತೆ ಹೊಂದಿದವರಿಗೆ ಸಿಎನ್‌ಸಿ ಆಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ ಮತ್ತು ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರಿಗೆ ರಿಪೇರ್ ಪೇಂಟರ್ ಆಟೋಬಾಡಿ ಜಾಬ್ ರೋಲ್‌ಗಳಿಗೆ ಉಚಿತ ತರಬೇತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು kaushalkar.com ಪೋರ್ಟಲ್‌ನಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 99800 87726, 79756 3367)ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment