ಗೆಳತಿಯ ಶವದೆದುರೇ ಅಫ್ತಾಬ್ ಪೂನಾವಾಲಾ ಡೇಟಿಂಗ್ ಇಬ್ಬರ ಮೇಲೆ ಪೊಲೀಸ್ ನಿಗಾ ಹಂತಕನ ಕರಾಳಮುಖ ಅನಾವರಣ
ನವದೆಹಲಿ : ಗೆಳತಿಯ ಘೋರ ಹತ್ಯೆ ಮಾಡಿ ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಬರ್ಬರ ಕೃತ್ಯದ ಆರೋಪಿಯ ಇನ್ನಷ್ಟು ಕಿರಾತಕ ಗುಣ ಬಹಿರಂಗವಾಗತೊಡಗಿದೆ.
ಶ್ರೇದ್ದಾ ವಾಲಕರ್ ಜೊತೆ ಲಿವಿಂಗ್ ಇನ್ ರಿಲೇಷನ್ ಶಿಪ್ ಹೊಂದಿದ್ದ ಅಫ್ತಾಬ್ ಪೂನಾವಾಲಾ, ಆಕೆಯನ್ನು ತುಂಡರಿಸಿದ ಫ್ರಿಜ್ ನಲ್ಲಿಟ್ಟಿದ್ದ ಅವಧಿಯಲ್ಲಿಯೇ ಬೇರೊಬ್ಬಳೊಂದಿಗೆ ಡೇಟಿಂಗ್ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಗೆಳತಿಯ ಕೊಲೆಗೆ ಅದೇ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಇತರೆವ್ಯಕ್ತಿಗಳ ಪಾತ್ರದ ಕರಿತೂ ಪರಿಶೀಲನೆ ನಡೆಸಲಾಗುತ್ತಿದೆ.
ಅಫ್ತಾಬ್ ಗೆ ಶ್ರದ್ಧಾ ಪರಿಚಯವಾಗಿದ್ದು ಬಂಬಲ್ ಎನ್ನುವ ಡೇಟಿಂಗ್ ಆಪ್ ನಲ್ಲಿ ಅದೇ ಆಪ್ ಮೂಲಕ ಇನ್ನಷ್ಟು ಯುವತಿಯರನ್ನು ಅಫ್ತಾಬ್ ಬುಟ್ಟಿಗೆ ಹಾಕಿಕೊಂಡಿದ್ದ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲು ಮುಂದಾಗಿರುವ ಪೊಲೀಸರು ವಿವರಗಳನ್ನು ಒದಗಿಸುವಂತೆ ಟೆಕ್ಸಾಸ್ ನಲ್ಲಿರುವ ಬಂಬಲ್ ಮುಖ್ಯ ಕಚೇರಿಗೆ ಪತ್ರ ಬರೆದಿದ್ದಾರೆ.
ಇದುವರೆಗೆ ಅರಣ್ಯ ಪ್ರದೇಶದಿಂದ 12 ತುಣಕುಗಳನ್ನು ಸಂಗ್ರಹಿಸಲಾಗಿದೆ. ಅದು ಮನುಷ್ಯರ ದೇಹದ ಭಾಗಗಳಂತೆ ಕಂಡು ಬಂದಿದೆ. ಘಟನೆ ನಡೆದು ಆರು ತಿಂಗಳು ಕಳೆದಿರುವುದರಿಂದ ಅವನ್ನು ಪತ್ತೆ ಹಚ್ಚುವುದೇ ಕಷ್ಟವಾಗಿದೆ. ತಲೆಯ ಬುರಡೆ ಇನ್ನೂ ಸಿಕ್ಕಿಲ್ಲ. ಶ್ರದ್ಧಾ ತಂದೆಯ ಡಿಎನ್‌ಎ ಸ್ಯಾಂಪಲ್ ಸಂಗ್ರಹಿಸಿದ್ದು, ಸಂಗ್ರಹವಾಗಿರುವ ಭಾಗಗಳ ಡಿಎನ್‌ಎ ಪರೀಕ್ಷೆ ಮಾಡಿಸಲಾಗುತ್ತಿದೆ. ಆಮೂಲಕ ಅದು ಶ್ರದ್ಧಾ ದೇಹದ ಭಾಗಗಳೇ ಅಲ್ಲವೇ ಅನ್ನುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಯತ್ನಿಸುತ್ತಿದ್ದಾರೆ.
ಗೆಳತಿಯ ಶವದೆದುರೇ ಅಫ್ತಾಬ್ ಪೂನಾವಾಲಾ ಡೇಟಿಂಗ್ ಇಬ್ಬರ ಮೇಲೆ ಪೊಲೀಸ್ ನಿಗಾ ಹಂತಕನ ಕರಾಳಮುಖ ಅನಾವರಣ
ಸಂಚು ರೂಪಿಸಿದ್ದು ಯಾವಾಗ
2018 ರಿಂದಲೇ ಇಬ್ಬರ ನಡುವೆ ಗೆಳತನ ಬೆಳೆದಿತು. ಆಗಾಗ ಇಬ್ಬರ ನಡುವೆ ಜಗಳವೂ ಆಗುತ್ತಿತು. ಅಫ್ತಾಬ್ ಒಟ್ಟು ಬರುವಂತೆ ತಂದೆ ಸಲಹೆ ನೀಡಿದರೂ, ಶ್ರದ್ಧಾ ಅದಕ್ಕೆ ಒಪ್ಪಿರಲಿಲ್ಲ. ಈ ನಡುವೆ ಒಂದಷ್ಟು ದಿನಗಳ ಕಾಲ ಇಬ್ಬರೂ ಹಿಮಾಚಲ ಪ್ರದೇಶಕ್ಕೂ ಹೋಗಿ ಅವರು ವಾಪಸವಾಗಿದ್ದರು. ಈ ಸಂದರ್ಭದಲ್ಲಿಯೇ ಅವರಿಗೆ ದೆಹಲಿಯ ವ್ಯಕ್ತಿಯೊಬ್ಬ ಪರಿಚಿತನಾದ ಆ ಮೂಲಕ ದೆಹಲಿಯ ವ್ಯಕ್ತಿಯೊಬ್ಬ ಪರಿಚಿತನಾದ ಆ ಮೂಲಕ ದೆಹಲಿಗೆ ಬಂದು ನೆಲೆಸಿದರು. ಅಗಲೂ ಇಬ್ಬರ ನಡುವಿನ ಜಗಳ ನಿಂತಿರಲಿಲ್ಲ. ಅಷ್ಟೂತ್ತಿಗಾಗಲೇ ಶ್ರದ್ಧಾ ಕೊಲೆಗೆ ಆತ ಸಂಚು ರೂಪಿಸಿದ್ದನೇ ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ.
ನಾನು ಶ್ರದ್ಧಾ ಜೊತೆ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಅವಳ ಸ್ನೇಹಿತೆಯಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೆ ಶ್ರದ್ಧಾ ಬೆಂಗಳೂರಿನಲ್ಲಿರಬಹುದು ಎಂದು ಕೊಂಡಿದ್ದೆ. ಆದರೆ ಅವಳು ದೆಹಲಿಯಲ್ಲಿದ್ದಾಳೆ. ಎನ್ನುವುದು ಗೊತ್ತಾಗಿದ್ದು, ಆ ಸ್ನೇಹಿತೆಯಿಂದಲೇ ಇದು ಗೊತ್ತಾಗಿದ್ದು, ಆ ಸ್ನೇಹಿತೆಯಿಂದಲೇ, ಇದು ಲವ್ ಜಿಹಾದ್ ಪ್ರಕರಣ ಹಂತಕನಿಗೆ ಗಲ್ಲು ಶಿಕ್ಷೆ ಯಾಗಬೇಕು.
ವಿಕಾಸ ವಾಲಕರ್ ಮೃತಳ ತಂದೆ
ಅಫ್ತಾಬ್ ಖಾತೆ ವಿವರ ಕೇಳಿ ಡೇಟಿಂಗ್ ಆಪ್ ಕಚೇರಿಗೆ ಪೊಲೀಸ್ ನೋಟಿಸ್
ಕೊಲೆಯಲ್ಲಿ ಇನ್ನೊಬ್ಬ ಮಹಿಳೆಯ ಪಾತ್ರದ ಕುರಿತು ಪೊಲೀಸರು ಸಂಶಯ
13 ಭಾಗಗಳು ವಶ, ಪೊಲೀಸರಿಗೆ ಇನ್ನೂ ದೊರೆಯದ ಶ್ರದ್ಧಾ ತಲೆಬುರಡೆ
Leave a Comment