ಜಿಲ್ಲೆಗೆ 232 ಹೊಸ ಮೊಬೈಲ್ ಟವರ್ ಮಂಜೂರು
ಶಿರಸಿ : ಸಂಸದ ಅನಂತಕುಮಾರ ಹೆಗಡೆಯವರ ಪ್ರಯತ್ನದಿಂದ ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆಯಿಂದ 232 ಹೊಸ ಮೊಬೈಲ್ ಟವರ್ ಮಂಜೂರಿಯಾಗಿರುವುದಾಗಿ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.
ಜಿಲ್ಲೆಗೆ 232 ಹೊಸ ಮೊಬೈಲ್ ಟವರ್ ಮಂಜೂರು
ಈಗಾಗಲೇ ಜಿಲೆಯಲ್ಲಿ 2ಜಿಯ 243 ಹಾಗೂ 4ಜಿ ಸೇವೆಯ 217 ಮೊಬೈಲ್ ಟವರ್ಗಳು ಕಾರ್ಯನಿರ್ವಹಿಸುತ್ತಿದ್ದು, ಈಗ ಹೊಸದಾಗಿ 196 ಟವರ್ ನಿರ್ಮಾಣದಿಂದ ಜಿಲ್ಲೆಯ ಬಹುತೇಕ ಎಲ್ಲಾ ಹಳ್ಳಿಗಳಲ್ಲಿಯೂ ಮೊಬೈಲ್ ಸಿಗ್ನಲ್ ಸಿಗವಂತಾಗಲಿದೆ. ಅತೀ ಹೆಚ್ಚು ಅರಣ್ಯ ಪ್ರದೇಶದಿಂದ ಅವೃತವಾದ ಜೋಯಿಡಾ ತಾಲೂಕಿನ 42 ಟವರ್ಗಳು ಮಂಜೂರಾಗಿದ್ದು, ಇದರಿಂದ ಕುಗ್ರಾಮಗಳಿಗೂ ಸಂಪರ್ಕ ದೊರೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಟವರ್ಗಳ ಪೈಕಿ 18 ಟವರ್ಗಳು 2ಜಿಯಿಂದ 3ಜಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಇದುವರೆಗೂ ಮೊಬೈಲ್ ಸಿಗ್ನಲ್ ಸಿಗದ 196 ಹಳ್ಳಿಗಳನ್ನು ಗುರುತಿಸಿ ಟವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಈಗಾಗಲೇ ಸ್ಥಳ ಗುರುತಿಸುವಿಕೆ ಪ್ರಾರಂಭವಾಗಿದ್ದು ಒಂದು ವರ್ಷದ ಒಳಗೆ ಕಾಮಗಾರಿಗಳನ್ನು ಮುಗಿಸುವಂತೆ ಗಡವು ನೀಡಲಾಗಿದೆ.
ತಾಲೂಕಾವಾರು ಮಂಜೂರಾದ ಟವರ್ಗಳು
ತಾಲೂಕು ಟವರ್ಗಳ ಸಂಖ್ಯೆ
ಕಾರವಾರ 08
ಅಂಕೋಲಾ 12
ಕುಮಟಾ 19
ಹೊನ್ನಾವರ 08
ಭಟ್ಕಳ 13
ಸಿದ್ಧಾಪುರ 17
ಶಿರಸಿ 24
ಮುಂಡಗೋಡ 10
ಯಲ್ಲಾಪುರ 34
ಹಳಿಯಾಳ 06
ದಾಂಡೇಲಿ 03
ಜೊಯಿಡಾ 42
Leave a Comment