ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೆ 2500 ರಿಂದ 11000 ವಿದ್ಯಾರ್ಥಿವೇತನ/vidyanidhi scholarship 2022 for taxi auto drivers childrens
ರಾಜ್ಯದ ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಆಟೋ ಚಾಲಕರ ಮಕ್ಕಳ ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸ ಉತ್ತೇಜಿಸಲು ವಿದ್ಯಾನಿಧಿ ಯೋಜನೆಯಲ್ಲಿ ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿವೇತನ ಮೊತ್ತ;
ಪದವಿ ಪೂರ್ವ: ಪಿಯುಸಿ, ಐಟಿಐ, ಡಿಪ್ಲೋಮ ಹುಡುಗರಿಗೆ 2,500 ಸಾವಿರ ರೂ. ಹುಡುಗಿಯರಿಗೆ 3 ಸಾವಿರ ರೂ.
ಎಲ್ಲಾ ಪದವಿ : ಹುಡುಗರಿಗೆ 5 ಸಾವಿರ ರೂ., ಹುಡುಗಿಯರಿಗೆ 5,500 ರೂ.
ಎಲ್ಎಲ್ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮ್, ನರ್ಸಿಂಗ್ : ಹುಡುಗರಿಗೆ 7,500 ಸಾವಿರ ರೂ., ಹುಡುಗಿಯರಿಗೆ 8 ಸಾವಿರ ರೂ.
ಎಂಬಿಬಿಎಸ್, ಬಿಇ, ಬಿಟೆಕ್ : ಹುಡುಗರಿಗೆ 10 ಸಾವಿರ ರೂ., ಹುಡುಗಿಯರಿಗೆ 11 ಸಾವಿರ ರೂ.
ಅರ್ಹತೆ;
ಪಿಯುಸಿ ಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಕರ್ನಾಟಕದಲ್ಲಿಅಧಿಕೃತ ನೋಂದಣಿ ಆಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪಿಯುಸಿ, ಡಿಪ್ಲೋಮ, ಐಟಿಐ, ಪದವಿ, ಎಲ್ಎಲ್ಬಿ, ಪ್ಯಾರಾ ಮೆಡಿಕಲ್, ಬಿ ಫಾರ್ಮ್, ನರ್ಸಿಂಗ್, ಎಂಬಿಬಿಎಸ್, ಬಿಇ, ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗೆ ಪ್ರವೇಶ ಪಡೆದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಅರ್ಹತೆ;
ಚಾಲಕರು, ಕರ್ನಾಟಕದ ನಿವಾಸಿಯಾಗಿರಬೇಕು. ರಾಜ್ಯದ ಯಾವುದೇ ಪ್ರಾದೇಶಿಕ, ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಮೋಟಾರು ಕ್ಯಾಬ್/ ಆಟೋರಿಕ್ಷಾ ಕ್ಯಾಬ್ ವರ್ಗಗಳ ವಾಹನಗಳನ್ನು ಚಲಾಯಿಸಲು ಸಾರಥಿ ತಂತ್ರಾಂಶದಲ್ಲಿ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾಪತ್ರ ಹೊಂದಿರುವ ಯೆಲ್ಲೋ ಬೋರ್ಡ್ ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರಾಗಿರಬೇಕು.
ಚಾಲಕರ ಕುಟುಂಬದ ಎಲ್ಲಾ ಮಕ್ಕಳು ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. ಚಾಲಕರ ಕುಟುಂಬದ ವಿದ್ಯಾರ್ಥಿಯು ಇತರ ವಿದ್ಯಾರ್ಥಿವೇತನ ಪಡೆಯುತ್ತಿದ್ದರೂ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ.
ತಂದೆ- ತಾಯಿ ಇಬ್ಬರೂ ಚಾಲಕರಾಗಿದ್ದು, ಸಾರಥಿ ತಂತ್ರಾಂಶದ ದತ್ತಾಂಶದಲ್ಲಿ ದಾಖಲಾಗಿದ್ದಲ್ಲಿಈ ಯೋಜನೆಯಲ್ಲಿ, ಒಂದು ವಿದ್ಯಾರ್ಥಿವೇತನಕ್ಕೆ ಮಾತ್ರ ಚಾಲಕರ ಮಕ್ಕಳು ಅರ್ಹರಾಗಿರುತ್ತಾರೆ.
ಹೆಚ್ಚಿನ ವಿದ್ಯಾರ್ಥಿ ವೇತನಕ್ಕಾಗಿ ಲಿಂಕ್ ಕ್ಲಿಕ್ ಮಾಡಿ ; ವಿದ್ಯಾರ್ಥಿವೇತನ-scholarship/
apply link /ಅರ್ಜಿ ಸಲ್ಲಿಸಲು;
ಸೇವಾ ಸಿಂಧು, https://sevasindhu.karnataka.gov.in/ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ನಲ್ಲಿಅಗತ್ಯ ದಾಖಲೆ ಸಲ್ಲಿಸುವ ಮೂಲಕ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ವಾಟ್ಸಾಪ್ ಗ್ರೂಪ್ ; join our whatsapp group
Leave a Comment