ಹೆಜ್ಜೇನು ದಾಳಿ: ಮೂವರು ಆಸ್ಪತ್ರೆಗೆ
ಭಟ್ಕಳ: ಹೆಜ್ಜೇನು ಹುಳುಗಳು ದಾಳಿ ಮಾಡಿದ ಪರಿಣಾಮ ಮನೆಯಲ್ಲಿದ್ದ ಮಹಿಳೆಯೂ ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ತಾಲೂಕಿನ ತೆರ್ನಮಕ್ಕಿಯಲ್ಲಿನ ಸಭಾತಿಯಲ್ಲಿ ನಡೆದಿದೆ.
,ಮಂಜಪ್ಪ ನಾಯ್ಕ , ವೆಂಕಟಪ್ಪ ನಾಯ್ಕ ಹಾಗೂ ಇನ್ನೋರ್ವ ಮಹಿಳೆ ಹೆಜ್ಜೇನು ಹುಳುಗಳ ದಾಳಿಗೊಳಗಾದವರು.
ಮನೆಯ ಸಮೀಪದಲ್ಲಿಯೇ ಇದ್ದ ಮರವೊಂದರಲ್ಲಿ ಜೇನು ಗೂಡು ಕಟ್ಟಿದ್ದು, ಆಕಸ್ಮಾತ್ ಮರದ ಕೊಂಬೆ ಮುರಿದು ಬಿದ್ದಿದ್ದರಿಂದ ಜೇನು ನೊಣಗಳು ಏಕಾ ಏಕಿ ಮನೆಗೆ ನುಗ್ಗಿ ಕಚ್ಚಿದವು ಎನ್ನಲಾಗಿದೆ.
ತಕ್ಷಣ ಮೂವರನ್ನು ಇಲ್ಲಿನ ತಾಲೂಕಾ ಸರಕಾರಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
Leave a Comment