ಹೃದ್ರೋಗ: ಸ್ಟೆಂಟ್‌ಗಳ ಬೆಲೆ ಇಳಿಕೆ ನಿರೀಕ್ಷೆ
ನವದೆಹಲಿ: ರಕ್ತನಾಳಗಳಲ್ಲಿ ಬಳಸಲಾಗುವ ಕೊರೊನರಿ ಸ್ಟೆಂಟ್‌ಗಳನ್ನು ಸ್ಟಂಟ್‌ಗಳನ್ನು ಅಗತ್ಯ ವೈದ್ಯಕೀಯ ವಸ್ತುಗಳ ಪಟ್ಟಿ (ಎನ್‌ಎಲ್ ಇಎಂ) ಯಲ್ಲಿ ಸೇರಿಸಿರುವು ದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದೆ.
ಇದರಿಂದ ಅನೇಕ ಸಂದರ್ಭಗಳಲ್ಲಿ ಜೀವ ಉಳಿಸಬಹು ದಾದ ಸ್ಟಂಟ್‌ಗಳು ಕೈಗೆಟುಕುವ ಬೆಲೆಯಲ್ಲಿ ದೊರಕಲಿದೆ.
ಈ ಕುರಿತು ನೇಮಿಸಲಾಗಿದ್ದ ತಜ್ಞರ ಸಮಿತಿ ನೀಡಿದ ಶಿಫಾರಸಿನ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಾಗಿದೆ. ಈಗ ಸ್ಟಂಟ್‌ಗಳ ಬೆಲೆಯನ್ನು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ(ಎನ್‌ಪಿಪಿಎ) ನಿಗದಿ ಪಡಿಸಲಿದೆ.
ನ.6ರಂದು ವೈದ್ಯಕೀಯ ವಿಷಯದ ಸ್ಥಾಯಿ ಸಮಿತಿ ಸ್ಟಂಟ್‌ಗಳನ್ನು ಎನ್‌ಎಲ್‌ಇಎಂ ಪಟ್ಟಿಗೆ ಸೇರಿಸುವಂತೆ ಶಿಫಾರಸು ಸಲ್ಲಿಸಿತ್ತು.
ಅದರಂತೆ ಬೇರ್ ಮೆಟಲ್‌ಸ್ಟೆಂಟ್ ಮತ್ತು ಡ್ರಗ್ ಲ್ಯೂಟಿಂಗ್ ಸ್ಟೆಂಟ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಇಂಥ ಪರಿಧಮನಿ ಕಾಯಿಲೆಗಳಲ್ಲಿ ಸಾವಿನ ಪ್ರಮಾಣ ಹೆಚ್ಚಿರುವುದರಿಂದ ಅಲ್ಲಿ ಅಳವಡಿಸುವ ಸ್ಟೆಂಟ್‌ಗಳನ್ನು ಎನ್‌ಎಲ್ ಇಎಂ ವ್ಯಾಪ್ತಿಗೆ ತರುವುದು ಅಗತ್ಯ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿತ್ತು.
Leave a Comment