ಸ್ಕಿಲ್ ಕನೆಕ್ಟ್ನಲ್ಲಿ ನೋಂದಾವಣೆಗೆ ಅವಕಾಶ
ಕಾರವಾರ : ರಾಜ್ಯ ಸರ್ಕಾರವು ಕೌಶಲ್ಯಾಭಿವೃದ್ಧಿ, ಉದ್ಯಮಿಶೀಲತೆ ಮತ್ತು ಜೀವನೋಪಾಯ ಇಲಾಖೆಯು ಯುವಜನತೆಗೆ ಕೌಶಲ್ಯ ಉದ್ಯಮಶೀಲತೆ ಮತ್ತು ಉದ್ಯೋಗವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸ್ಕಿಲ್ ಕನೆಕ್ಟ್ ಎಂಬ ಹೊಸ ವೆಬ್ ಪೊರ್ಟ್ಲ್ ನ್ನು ಅನಾವರಣಗೊಳಿಸಿದೆ.
ಈ ವೆಬ್ ಪೊರ್ಟಲ್‌ನಲ್ಲಿ ಈಗಾಗಲೇ 25000 ಕ್ಕೂ ಹೆಚ್ಚು ಉದ್ಯೋಗವಕಾಶಗಳು ಹಾಗೂ ಕೌಶಲ್ಯಾಭಿವೃದ್ಧಿಗೆ ಸಂಬಧಿಸಿದ ಕಂಪನಿಗಳು ನೋಂದಾಣಿಯಾಗಿರುತ್ತವೆ. ವೆಬ್ ಪೊರ್ಟ್ಲ್ ನಲ್ಲಿ ನೋಂದಾಣಿಯಾಗಿರುವ ಕಂಪನಿಗಳು ಅಭ್ಯರ್ಥಿಗಳ ಬಾಯೋಡಾಟಾವನ್ನು ಪರಿಶೀಲಿಸಿ ಉದ್ಯೋಗಕ್ಕೆ ಪರಿಗಣಿಸುವುದರಿಂದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಶುಲ್ಕ ಹಾಗೂ ಅನುಭವವನ್ನು www.skill connect.kaushalkar.com ನಲ್ಲಿ ನೋಂದಾಯಿಸಿಕೊAಡು ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಛೇರಿ ಅಥವಾ ದೂರವಾಣಿ ಸಂಖ್ಯೆ : 9975633671 ಅಥವಾ 88619 11982 ಅವರನ್ನು ಸಮಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment