ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ್ಯಾಂಕ್
ಕುಮಟಾ : ತಾಲೂಕಿನ ಗೋಕರ್ಣ ಪ್ರತೀಕ್ಷಾ ಪೈ ಅವರಿಗೆ ರಾಷ್ಟçಮಟ್ಟದಲ್ಲಿ ಪ್ರಸಿದ್ಧ ನಾಲ್ಕು ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಗಾಗಿ ನಡೆಯುವ ಐಎನ್ ಐಸಿಇಟಿ ಪರೀಕ್ಷೆಯಲ್ಲಿ 99.9% ದೊಂದಿಗೆ ನಾಲ್ಕನೇ ರ್ಯಾಂಕ್ ದೊರಕಿದೆ.
ನ.13 ರಂದು ಈ ರಾಷ್ಟçಮಟ್ಟದ ಪರೀಕ್ಷೆಯನ್ನು ನವದೆಹಲಿಯ ಏಮ್ಸ್ ಆಯೋಜಿಸಿತ್ತು. ಪ್ರತೀಕ್ಷಾ ಪೈ ಕಳೆದ ವರ್ಷ ಎಂಬಿಬಿಎಸ್ ನಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಮಸ್ಥೆಯಲ್ಲಿ 12 ಬಂಗಾರದ ಪದಕಗಳನ್ನು ಪಡೆದು ಎಲ್ಲ ಹಿಂದಿನ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸ್ಥಾಪಿಸಿದ್ದನ್ನು ಸ್ಮರಿಸಬಹುದಾಗಿದೆ.
ಇವರು ಮೂಲತಃ ಗೋಕರ್ಣದ ಮಾರುತಿ ಪೈ ಹಾಗೂ ಶಾಂತಾ ಪೈ ಹಾಗೂ ಕುಮಟಾದ ಹಿರಿಯ ವಕೀಲರಾಗಿದ್ದ ದಿ.ವೆಂಕಟೇಶ ಶಾನಬಾಗ ದಿ.ಜಾನಕಿ ಶಾನಭಾಗ ಅವರ ಮೊಮ್ಮಗಳಾಗಿದ್ದಾರೆ. ಜಯಂತ ಎಂ.ಪೈ ಮತ್ತು ಭಾರತಿ ಪೈ ಯವರ ಮಗಳಾಗಿದ್ದಾರೆ. ಇವರ ಅಪೂರ್ವ ಸಾಧನೆಗೆ ಕುಟುಂಬದವರು, ಅಪ್ತೇಷ್ಟರು, ಗುರುಹಿರಿಯರು ಹರ್ಷ ವ್ಯಾಕ್ತಪಡಿಸಿದ್ದಾರೆ.
Leave a Comment