24 ಗಂಟೆಯೊಳಗೆ ಸರ ಕಳ್ಳನ ಬಂಧನ
ಹೊನ್ನಾವರ : ಚಂದಾವರ ಸಮೀಪ ನಡೆದ ಕಳ್ಳತನ ಪ್ರಕರಣವನ್ನು 24 ಗಂಟೆಯೊಳಗೆ ಪ್ರಕರಣ ಛೇದಿಸಲು ಮೂಲಕ ಪೊಲೀಸರು ಸಾರ್ವಜನಿಕರು ವಲಯದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಭಾನುವಾರ ಹೊದ್ಕೆ ಶಿರೂರಿನ ವೀಣಾ ದೇಶಭಂಡಾರಿ ಎನ್ನುವವರು ಚಂದಾವರದಲ್ಲಿ ಮದುವೆ ಮುಗಿಸಿ ಟೆಂಪೊಗೆ ಕಾಯುತ್ತಿದ್ದಾಗ ಏಕಾಏಕಿ ಕುತ್ತಿಗೆಗೆ ಕೈಹಾಕಿ ಸರ ಎಗರಿಸಿ ವ್ಯಕ್ತಿಯೊರ್ವ ಪರಾರಿಯಾಗಿದ್ದ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು. ನಂತರ ದೂರು ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿ ಸೋಮವಾರ ಮುಂಜಾನೆ ಪ್ರಕರಣ ಛೇಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಹೊದಿಕೆಶಿರೂರು ಹೂವಿನ ಹಿತ್ತಲಿನ ಗಣಪತಿ ಗೌಡ ಎನ್ನುವವನನ್ನು ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದ್ದು, 39 ಗ್ರಾಂ. ಚಿನ್ನದ ಸರವನ್ನು ಜಪ್ತುಪಡಿಸಿಕೊಂಡು ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಸಿಪಿಐ ಶ್ರೀಧರ ಎಸ್. ಆರ್., ಪಿಎಸೈ ಮಹಾಂತೇಶ ನಾಯಕ, ಎಮ್.ವಿ.ಚಂದಾವರ, ಸಿಬ್ಬಂದಿ ಪ್ರಶಾಂತ ನಾಯ್ಕ, ಮಹಾವೀರ, ರಮಾನಂದ ನಾಯ್ಕ, ಸಂತೋಷ ನಾಯ್ಕ, ಕೃಷ್ಣ ಗೌಡ, ಉದಯ ಮಗದೂರು, ಶಿವಾನಂದ ಚಿತ್ರರಗಿ, ಚಂದ್ರಶೇಖರ ನಾಯ್ಕೆ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment