ಪುನರ್ವಸತಿ ಕಾರ್ಯಕರ್ತರ ನೇಮಕಾತಿ 2022-23
ಕಾರವಾರ : ಶಿಶು ಅಭಿವೃಧ್ಧಿ ಯೊಜನಾಧಿಕಾರಿಗಳ ಕಚೇರಿಯ 2022 – 23 ನೇ ಸಾಲಿನ ತಾಲೂಕಿನ ಕಡವಾಡ, ದೇವಳಮಕ್ಕಿ ಮಜಾಳಿ ಗ್ರಾಮ ಪಂಚಾಯತಿಯಲ್ಲಿ ತಲಾ ಒಂದರAತೆ 3 ಹುದ್ದೆಗಳು, ನಗರಸಭೆ ವ್ಯಾಪ್ತಿಯಲ್ಲಿ 2 ಹುದ್ದೆ, ಒಟ್ಟು 5 ಹುದ್ದೆಗಳನ್ನು ನಗರ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿದಾರರು ದೈಹಿಕ ವಿಕಲಚೇತನರಾಗಿದ್ದು, ನಡೆದಾಡಲು ಸಮರ್ಥರಿರುವ ಕನಿಷ್ಠ ಎಸ್, ಎಸ್, ಎಲ್, ಸಿ ವಿದ್ಯಾರ್ಹತೆ ಹೊಂದಿರುವ, 18 ರಿಂದ 45 ವಯೋಮಿತಿಯವರಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯ ಫಾರ್ಮಗಳನ್ನು ನೋಡಲ್ ಅಧಿಕಾರಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಹಾಗೂ ವಿವಿದ್ದೋದ್ದೇಶ ಪುನರ್ವಸರಿ ಕಾರ್ಯಕರ್ತರನ್ನು ಸಂಪರ್ಕಿಸಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಡಿ.31ರೊಳಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08382 – 222 532 ಗೆ ಸಂಪರ್ಕಿಸಲು ಎಂದು ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment