ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್
ಹೊನಾವರ :
ಹೊನ್ನಾವರ ತಾಲೂಕಿನ ಚಂದವಾರ ಗ್ರಾಮದ ಇಮ್ದಾದ್ ಮುಲ್ಲಾನನ್ನ ಹರಿಯಾಣ ಪೊಲೀಸರು ಹೊನ್ನಾವರ ಪೊಲೀಸರ ಸಹಕಾರದಲ್ಲಿ ಆತನ ಮನೆಯಲ್ಲಿ ವಶಕ್ಕೆ ಪಡೆದಿದ್ದು, ಆತನಿಂದ ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನ ಹರಿಯಾಣ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ವಿವಾಹಿತ ಮಹಿಳೆಯ ಪೋಟೋಗಳನ್ನ ಎಡಿಟ್ ಮಾಡಿ ಆಕೆಯ ಸ್ನೇಹಿತರಿಗೆ ಕಳುಹಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದ
ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್
ಆಕೆಯ ಫೊಟೊವನ್ನ ಬೆತ್ತಲಿರುವಂತೆ ಎಡಿಟ್ ಮಾಡಿ. ಆಕೆಯ ಫೊಟೊಗಳನ್ನ ಬಳಸಿ ನಕಲಿ ಅಶ್ಲೀಲ ವಿಡಿಯೋ ಗಳನ್ನೂ ತಯಾರಿಸಿ, ಆಕೆಯ ನಂಬರ್ ನಿಂದಲ್ಲೇ ಆಕೆಯ ಸಂಪರ್ಕದಲ್ಲಿದ್ದ ಇತರೆ ನಂಬರ್‌ಗಳಿಗೆ ಪ್ರತಿನಿತ್ಯ ಬೆಳಿಗ್ಗೆ. ರಾತ್ರಿ ಪೋಟೋ ಹಾಗೂ ವಿಡಿಯೋಗಳನ್ನ ಕಳುಹಿಸುತ್ತಿದ್ದ. ವಿಷಯ ತಿಳಿದ ಮಹಿಳೆ ತನ್ನದೇ ನಂಬರ್ ನಿಂದ ವಿಡಿಯೋ, ಪೋಟೋಗಳು ಶೇರ್ ಆಗುತ್ತಿರುವುದರಿಂದ ಗಾಬರಿಗೊಂಡು, ಮಾನಸಿಕ ಹಿಂಸೆಗೆ ಸಹ ಗುರಿಯಾಗಿದ್ದಳು. ಅಲ್ಲದೇ ಆಕೆಯ ಸಾಂಸಾರಿಕ ಜೀವನದಲ್ಲೂ ಸಾಕಷ್ಟು ಒಡಕಿಗೆ ಕಾರಣವಾಗಿತ್ತು. ಇದರಿಂದ ಬೇಸತ್ತ ಮಹಿಳೆ ಗುರುಗ್ರಾಮ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ವೈಯಕ್ತಿಕ ದ್ವೇಷದಿಂದ ಅಮೆರಿಕಾ ಮೂಲದ ಮಹಿಳೆಯೋರ್ವಳು ಹರಿಯಾಣ ರಾಜ್ಯದ ಗುರುಗ್ರಾಮ ಮೂಲದ ವಿವಾಹಿತ ಮಹಿಳೆಯ ಚಾರಿತ್ರö್ಯ ಹಾಳು ಮಾಡಲು ಸಂಚು ಹೋಡಿದ್ದಳು ಎನ್ನಲಾಗಿದೆ. ಅದಕ್ಕಾಗಿ ಹ್ಯಾಕರ್ ಗಳನ್ನ ಹುಡುಕುತ್ತಾ. ಅಪ್ ವರ್ಕ್ ಡಾಟ್ ಕಾಮ್ ವೆಬ್ ಸೈಟ್ ಮೂಲಕ ಇಮ್ದಾದ್ ಮುಲ್ಲಾನ ಸಂಪರ್ಕ ಮಾಡಿದ್ದಳು. ತಾನು ಸೂಚಿಸಿದ ಮಹಿಳೆಯ ಮೊಬೈಲನ್ನ ಹ್ಯಾಕ್ ಮಾಡಿ, ಆಕೆಯ ನಂಬರ್‌ನಿAದ ಬೇರೆಯವರಿಗೆ ಆಕೆಯ ನಗ್ನ ವಿಡಿಯೋ ಹಾಗೂ ಪೋಟೋಗಳನ್ನ ಕಳುಹಿಸುವಂತೆ ಇಮ್ದಾಲ್ ಮುಲ್ಲಾನಿಗೆ ಸುಪಾರಿ ಕೊಟ್ಟಿದ್ದಳು ಎನ್ನಲಾಗಿದೆ. ಸುಪಾರಿ ಪಡೆದಿದ್ದ ಇಮ್ದಾದ್ ಮಹಿಳೆಯ ಮೊಬೈಲನ್ನ ಹ್ಯಾಕ್ ಮಾಡಿ, ಆಕೆಯ ಪೋಟೋಗಳನ್ನ ಮೊಬೈಲ್ ನಿಂದ ಪಡೆದುಕೊಂಡಿದ್ದ.
ಪ್ರಕರಣವನ್ನ ಗಂಬೀರವಾಗಿ ಪರಿಗಣಿಸಿದ್ದ ಹರಿಯಾಣ ಪೊಲೀಸರು, ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸುತ್ತಿರುವಾಗ ಅಮೆರಿಕಾ ಮೂಲದ ಮಹಿಳೆಯ ಜೊತೆ ಫಿರ್ಯಾದಿಗೆ ವೈಯಕ್ತಿಕ ದ್ವೇಷವಿರುವುದು ತಿಳಿದು ಬಂದಿದೆ. ಬಳಿಕ ಹೆಚ್ಚಿನ ಮಹಿತಿ ಕಲೆ ಹಾಕಿದಾಗ ಪ್ರಕರಣದಲ್ಲಿ ಚಂದವರ ಮೂಲದ ಹ್ಯಾಕರ್ ನ ಕೈವಾಡ ಇರುವ ಬಗ್ಗೆ ತಿಳಿದು ಬಂದಿದ್ದು, ಈತನನ್ನು ಹೊನ್ನಾವರದಿಂದ ವಶಕ್ಕೆ ಪಡೆದು ಹರಿಯಾಣಕ್ಕೆ ಕರೆದೊಯ್ದು ಅಲ್ಲಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್
ಹರಿಯಾಣ ಪೋಲಿಸರಿಗೆ ಪಿಐ ಶ್ರೀಧರ್ ನೇರವು
ಮೊಬೈಲ್ ಹ್ಯಾಕರ್ ಇಮ್ದಾದ್ ವಶಕ್ಕೆಪಡೆಯಲು ಹೊನ್ನಾವರ ಪೊಲೀಸ್ ಇನ್ಸೆ÷್ಪಕ್ಟರ್ ಶ್ರೀಧರ್ ಎಸ್.ಆರ್. ಮುಖ್ಯವಾಗಿ ಸಹಕಾರಿಯಾದರು. ಹರಿಯಾಣದಿಂದ ಬಂದ ಪೊಲೀಸರು ಶ್ರೀಧರ್ ಅವರ ಬಳಿ ಮಾಹಿತಿ ನೀಡಿದ್ದು, ಆತನನ್ನು ವಶಕ್ಕೆ ಪಡೆಯಲು ಕಾರ್ಯತಂತ್ರವನ್ನ ಶ್ರಿಧರ್ ನೇತೃತ್ವದಲ್ಲಿ ಮಾಡಲಾಗಿತ್ತು ಎನ್ನಲಾಗಿದೆ. ವಿಷಯ ತಿಳಿದರೆ ಮನೆಗೆ ತೆರಳುವ ಮುನ್ನವೇ ಮೊಬೈಲ್ ಹಾಗೂ ಲ್ಯಾಪ್ ಟಾಪ್ ನಲ್ಲಿರುವ ಡೇಟಾಗಳನ್ನ ಆರೋಪಿ ಡಿಲೀಟ್ ಮಾಡಬಹುದಾಗಿದ್ದರಿಂದ ವ್ಯವಸ್ಥಿತವಾಗಿ ಆತನ ಮನೆಯ ಸುತ್ತಲೂ ಪೊಲೀಸ್ ಸರ್ಪಗಾವಲನ್ನ ಹಾಕಿ, ಹರಿಯಾಣ ಹಾಗೂ ಹೊನ್ನಾವರ ಪೊಲೀಸರು ಜಂಟಿ ಕಾರ್ಯಚರಣೆನಡೆಸಿ ಇಮ್ದಾದ್ ನನ್ನ ವಶಕ್ಕೆ ಪಡೆಯುವಲ್ಲಿ ಯಶ್ವಸಿಯಾಗಿದ್ದಾರೆ.
ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್
ಐಷರಾಮಿ ಜೀವನ……
ಆರೋಪಿತ ಇಮ್ದಾದ್ ಐಷರಾಮಿಜೀವನ ನಡೆಸುತ್ತಿದ್ದುದು ಇಡೀತಾಲೂಕಿನಲ್ಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮಂಗಳೂರಿನ ಪ್ರತಿಷ್ಠಿತ ಎಂಜಿನಿಯರ್ ಕಾಲೇಜಿನಲ್ಲಿ 2017 ರಲ್ಲಿ ಬಿ.ಇ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ್ ಮುಗಿಸಿದ ನಂತರ ಅಮೆರಿಕನ್ ಮೆಡಿಕಲ್, ಜಸ್ಟ್ ಪೇಸೇರಿದಂತೆ ಹಲವು ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದ ಇಮ್ದಾದ್, ಯುಪಿಐ ಸಾಫ್ಟ್ವೇರ್ ಡೆವಲಪರ್ ಆಗಿ ಸಹ ಕೆಲಸ ಮಾಡಿದ್ದ
ನಂತರ ವಾಪಸ್ ಊರಿಗೆ ಬಂದು ಅಪ್ವರ್ಕ್ ಡಾಟ್ ಕಾಮ್(upwork.com) ನಲ್ಲಿ ಎಥಿಕಲ್ ಹ್ಯಾಕರ್ ಆಗಿ ಸೇರಿಕೊಂಡಿದ್ದ. ಈತನ ಬಳಿ ಐಷಾರಾಮಿ ಬಿ.ಎಂ ಡಬ್ಲೂö್ಯ ಕಾರು ಬಿ.ಎಂ,ಡಬ್ಲೂö್ಯ ಬೈಕ್‌ಗಳೂಇದ್ದು, ಭಾರೀ ಶೋಕಿ ಮಾಡಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ. ಪೊಲೀಸರು ಕೆಲ ಹಿಮದೆಈತನ ಆದಾಯದ ಮೂಲದ ಬಗ್ಗೆ ವಿಚಾರಣೆ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ.
ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್
ಗಂಟೆಗೆ 50 ಸಾವಿರ ,,,,!!!
ಆರೋಪಿತ ಇಮ್ದಾದ್, ಹ್ಯಾಕಿಂಗ್ ಕೆಲಸಕ್ಕಾಗಿ ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಎನ್ನಲಾಗಿದೆ. ಹರಿಯಾಣ ಮೂಲದ ಮಹಿಳೆಯ ಮೊಬೈಲ್ ಹ್ಯಾಕ್ ಮಾಡಲು ಸಹ ಅಮೇರಿಕಾ ಮೂಲದ ಮಹಿಳೆಯಿಂದ ಲಕ್ಷಾಂತರ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ.
Leave a Comment