ಕಾರುಗಳ ನಡುವೆ ಅಪಘಾತ ; ಈರ್ವರಿಗೆ ಗಾಯ
ಹೊನ್ನಾವರ : ಕಾರುಗಳ ನಡುವೆ ಅಪಘಾತ ಸಂಭವಿಸಿ ಈರ್ವರು ಗಾಯಗೊಂಡಿದ್ದಾರೆ. ಪಟ್ಟಣದ ಹೈವೇ ಸರ್ಕಲ್ ಹತ್ತಿರ ಗೇರುಸೊಪ್ಪಾ ಸರ್ಕಲ್ ಕಡೆಯಿಂದ ಅಜಾಗರೂಕತೆ ಹಾಗೂ ಅತೀ ವೇಗದಿಂದ ಚಲಾಯಿಸಿಕೊಂಡ ಬಂದ ಕಾರನ್ನು ಯಾವುದೇ ಮುನ್ಸೂಚನೆ ನೀಡದೇ ಬಜಾರ್ ರಸ್ತೆಯ ಕಡೆಗೆ ಹೋಗಲು ರಸ್ತೆಯ ಬಲಭಾಗಕ್ಕೆ ಒಮ್ಮಲೇ ಚಲಾಯಿಸಿದ ಪರಿಣಾಮ ಭಟ್ಕಳ ಕಡೆಯಿಂದ ಕುಮಟಾ ಕಡೆಗೆ ಚಲಾಯಿಸಿದೊಂಡು ಹೊಗುತ್ತಿದ್ದ ಕಾರಿನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಅಪಘಾತದಿAದ ಕಾರಿನಲ್ಲಿದ್ದ ಜೋಯಿಡಾ ಮೂಲದ ಜಯರಾಮ ಮತ್ತು ಮಾದೇವ ನಾಯ್ಕ ಅವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.
ಈ ಸಂಭAಧ ಆರೋಪಿತ ಕಾರು ಚಾಲಕ ಗುಣವಂತೆಯ ಮಾದೇವ ನಾಯ್ಕೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment