ಮನೆಗಳಲ್ಲಿ ಚಿನ್ನಾಭರಣ ನಗದು ಕಳವು
ಹೊನ್ನಾವರ : ಪಟ್ಟಣದ ದುರ್ಗಾಕೇರಿಯ ಅಕ್ಕಪಕ್ಕದ ಎರಡು ಮನೆಗಳಿಗೆ ನುಗ್ಗಿರುವ ಕಳ್ಳರು, ಚಿನ್ನಾಭರಣ ನಗದನ್ನ ಲೂಟಿಗೈದು ಪರಾರಿಯಾಗಿದ್ದಾರೆ.
ರಮೇಶ ಮೇಸ್ತ ಎನ್ನುವವರ ಮನೆಯಲ್ಲಿ ಲಾಕರ್ ನಿಂದ 4.92 ಲಕ್ಷ ರೂ. ಮೌಲ್ಯದ 123 ಗ್ರಾಂ ಚಿನ್ನ ಚಿನ್ನ., 35 ಸಾವಿರ ನಗದು, ಶಿವಶಂಕರ ಕೊಳುರು ಎನ್ನುವವರ ಮನೆಯ ಟಿಜೋರಿಯಲ್ಲಿದ್ದ 60 ಸಾವಿರ ನಗದು ಕಳವು ಮಾಡಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Leave a Comment