ನಗರದೊಳಗೆ ಚಿರತೆಗಳು ಪತ್ತೆ ಬಡಾವಣೆ ನಿವಾಸಿಗಳಲ್ಲಿ ಆತಂಕ
ಮೈಸೂರು : ಇದುವರೆಗೂ ನಗರ ಹೊರವಲಯ ಮತ್ತು ಗ್ರಾಮಾಂತರದಲ್ಲಿ ಕಾಣಿಸಿಜೊಳ್ಳುತ್ತಿದ್ದ ಚಿರತೆಗಳು ಈಗ ನಗರದ ಹೃದಯ ಭಾಗದಲ್ಲೂ ಗೋಚರಿಸಿವೆ.
ಸಿಎಫ್‌ಟಿಆರ್‌ಐ ಕ್ಯಾಂಪಸ್ ನಲ್ಲಿ ರಾತ್ರಿ ಎರಡು ಚಿರತೆಗಳು ಕಾಣಸಿಕ್ಕಿದ್ದು ಇದರಿಂದ ಸಿಎಫ್‌ಟಿಆರ್‌ಗೆ ಹೊಂದಿಕೊAಡAತಿರುವ ಒಂಟಿಕೊಪ್ಪಲು, ಪಡುವಾರಹಳ್ಳಿ ಬಡಾವಣೆಗಳ ನಿವಾಸಿಗಳಲ್ಲಿ ಅತಂಕ ಮನೆಮಾಡಿದೆ.
ಸದ್ಯ ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಕರ‍್ಯೋನ್ಮುಖವಾಗಿದೆ. ಚಿರತೆಗಳ ಓಡಾಟವನ್ನು ಸಿಎಫ್‌ಟಿಆರ್‌ಐ ಭದ್ರತಾ ಸಿಬ್ಬಂದಿ ಗಮನಿಸಿದ್ದು, ತಕ್ಷಣ ಅರಣ್ಯ ಇಲಾಖೆ ಮಾಹಿತಿ ನೀಡಿದ್ದಾರೆ.
ಓಡಾಟದ ಪ್ರದೇಶದಲ್ಲಿ ಈಗ ಬೋನಿಡಲಾಗಿದ್ದು ಹೆಚ್ಚುವರಿಯಾಗಿ 10 ಸಿಬ್ಬಂದಿ ಕರ‍್ಯಾಚರಣೆ ನಡೆಸುತ್ತಿದ್ದಾರೆ.
ತರಗತಿಗಳು ರದ್ದು : ಸಿಎಫ್‌ಟಿಆರ್‌ಐ ಆವರಣಲ್ಲಿ ಚಿರತೆಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಇಲ್ಲಿನ ಶಾಲಾ ತರಗತಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಯಿತು.
ಈಗ ಕ್ಯಾಪಸ್‌ನಲ್ಲಿ ಹೆಚ್ಚುವರಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಗತ್ಯವಿರುವ ಇನ್ನಷ್ಟು ಬೂನುಗಳನ್ನು ತಂದಿಡುವ ಚಿಂತನೆಯೂ ನಡೆಯುತ್ತಿದೆ. ಸಿಎಫ್‌ಟಿಆರ್‌ಐ ಆವರಣ ವಿಶಾಲವಾದುದಾಗಿದ್ದು ಇಲ್ಲಿ ದೊಡ್ಡ ಮರಗಳು, ಪೊದೆಗಳೂ ಇವೆ. ಹೀಗಾಗಿ ಚಿರತೆ ಆಶ್ರಯ ಪಡೆಯಲು ಇತ್ತ ಇರಬಹುದಾಗಿದೆ ಎಂದು ತಜ್ಞರೊಬ್ಬರು ಬೊಟ್ಟುಮಾಡಿದರು. ಮೇಟಗಳ್ಳಿಯ ನೋಟು ಮುದ್ರಣ ನಗರ, ಬಿಇಎಂಎಲ್ ಕ್ಯಾಂಪಸ್‌ನಲ್ಲಿಯೂ ಚಿರತೆಗಳು ಕಾಣಿಸಿಕೊಂಡಿದ್ದನ್ನು ಸ್ಮರಿಸಬಹುದು.
Leave a Comment