10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ 2023
ಶಿರಸಿ: ಮಿಯಾರ್ಡ್ಸ್ ಸಂಸ್ಥೆಯ ಚಂದನ ಶಾಲೆ ವತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ‘ಮಿಯಾರ್ಡ್ಸ್ ಚಂದನ ವಿದ್ಯಾರ್ಥಿ ವೇತನ ಕ್ಕೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಜ. 29ರಂದು ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ಬಹು ಆಯ್ಕೆ ಮಾದರಿಯಲ್ಲಿ ಇರಲಿದ್ದು, 10ನೇ ತರಗತಿಯ ಪಠ್ಯದ ಆಧಾರದಲ್ಲಿ ಪ್ರಶ್ನೆ ನೀಡಲಾಗುತ್ತದೆ.

ಆಸಕ್ತ ವಿದ್ಯಾರ್ಥಿಗಳು ಜ. 20ರೊಳಗೆ ಅರ್ಜಿ ಸಲ್ಲಿಸಬೇಕು. ಮಿಯಾರ್ಡ್ಸ್ ಏಕಲವ್ಯ ಕಂಪ್ಯೂಟರ್ ಸೆಂಟರ್, ಮಧುಕರ ಬಿಲ್ಡಿಂಗ, ಉಣ್ಣೆಮಠ ಗಲ್ಲಿ, ಸತ್ತಾರ್ ಹೊಟೆಲ್ ಎದುರು, ಶಿರಸಿ ಉ.ಕ. ಈ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು.
ಪರೀಕ್ಷೆಯು ಚಂದನ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
Application Form; . http://surl.li/egwuo ಇದರ ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ; 20-1-2023
Leave a Comment