ಆರನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕಾರವಾರ : ಅಂಕೋಲಾ ತಾಲೂಕಿನ ಶ್ರೀಮತಿ ಇಂದಿರಾ ಗಾಂಧಿ ವಸತಿ ಆಂಗ್ಲ ಮಾಧ್ಯಮ ಶಾಲೆಗೆ 2023 – 24 ನೇ ಸಾಲಿಗೆ ಆರನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
2022 – 23 ನೇ ಸಾಲಿನಲ್ಲಿ ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಯಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಜ.22 ರೊಳಗೆ ಪ್ರಾಧಿಕಾರದ ವೆಬ್ ಸೈಟ್ https://cetonline.karnataka.gov.in/kea/ ಅಥವಾ ವಸತಿ ಶಿಕ್ಷಣ ಸಂಸ್ಥೆ ವೆಬ್ ಸೈಟ್ http://kreis.kar.nic.in/ ಮೂಲಕ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪ್ರವೇಶ ಪರೀಕ್ಷೆಯನ್ನು ಮಾ. 12 ರಂದು ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಇಂದಿರಾ ಗಾಂಧಿ ವಸತಿ ವಸತಿ ಶಾಲೆ, ಹೊನ್ನಕೇರಿ ಅಂಕೋಲಾ ಅಥವಾ ಮೊಬೈಲ್ ಸಂಖ್ಯೆ : 9449203033 ಗೆ ಸಂಪರ್ಕಿಸಬಹುದು ಎಂದು ಶ್ರೀಮತಿ ಇಂದಿರಾ ಗಾಂಧಿ ವಸತಿ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment