ಬಿದಿರು ಸೇರಿ ಹತ್ತು ಜಾತಿ ಸಸ್ಯ ಸಂಕುಲ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಮುಕ್ತ
ಶಿರಸಿ :ಕೆಲವು ಜಾತಿಯ ಗಿಡಮರಗಳನ್ನು ಬೆಳಸುವಿಕೆ, ಕಟಾವು, ಸಾಗಣೆಗೆ ಸಂಬAಧಿಸಿ ಕರ್ನಾಟಕ ಸರ್ಕಾರದ ಅರಣ್ಯ, ಜೀವವೈವಿಧ್ಯ ಹಾಗೂ ಪರಿಸರ ಇಲಾಖೆ ಪರವಾನಿಗೆ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಬೇವು ಕರಿಜಾಲಿ, ಮಹಾಗನಿ, ಹೊಂಗೆ, ಬಳ್ಳಾರಿ ಜಾಲಿ, ಅಗರ್ ವುಡ್, ಬಾರೆ, ಶಿವನಿ ಹಾಗೂ ಬಹುಮುಖ್ಯವಾಗಿ ಡೌಗ ಬಿದಿರು ಮತ್ತು ಮೆದರಿ ಬಿದಿರು ಈ ಮುಕ್ತಗೊಳಿಸಲಾದ ಪಟ್ಟಿಯಲ್ಲಿ ಸೇರಿವೆ. ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯಿದೆ 1976 ಈ ಜಾತಿ ಸಸ್ಯಕ್ಕೆ ಅನ್ವಯವಾಗದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದೆ ಶಮೆ ಬಿದಿರನ್ನು ಹೊರತುಪಡಿಸಿ ಉಳಿದಲ್ಲ ಜಾತಿ ಬಿದಿರು ಅರಣ್ಯ ಸಂರಕ್ಷಣಾ ಕಾಯ್ದೆಯಡಿಯಲ್ಲಿ ನಿಂಬAಧನೆ ಬಳಪಟ್ಟಿದ್ದವು. ಆದರೆ ಈಗ ಎಲ್ಲ ಜಾತಿಯ ಬಿದಿರನ್ನು ಯಾರು ಬೇಕಾದರೂ ತಮ್ಮ ಜಾಗ, ಜಮೀನಿನಲ್ಲಿ ಬೆಳಸಿ ಕಟಾವು ಮಾಡಿ ಮಾರಿ ಆದಾಯಗಳಿಸುವ ಅವಕಾಶ ಒದಗಿಸಲಾಗಿದೆ. ಈ ಪ್ರಕ್ರಿಯೆಗೆ ಅರಣ್ಯ ಇಲಾಖೆಯ ಯಾವುದೇ ಪರವನಾಗಿ ಅಗತ್ಯವಿಲ್ಲ ಎಂದು ಇಲಾಖೆ ಮೂಲದಿಂದ ಸ್ಪಷ್ಟನೆ ಲಭಿಸಿದೆ.
ರೈತರು ತಮ್ಮ ಜಮೀನು, ಬೆಟ್ಟದಲ್ಲಿ ಬಿದಿರು ಬೆಳೆದು ಆದಾಯ ಗಳಿಸಬಹುದೆಂಬ ಆಶಯಕ್ಕೆ ಈ ಮೂಲಕ ಪೂರಕ ಅವಕಾಶ ಲಭಿಸಿದಂತಾಗಿದ್ದು ಜಿಲ್ಲೆಯಲ್ಲಿ ರೈತರು ಈ ಬಗ್ಗೆ ಆಸಕ್ತಿ ವಹಿಸಿದರೆ ಬೆಟ್ಟಭೂಮಿಯ ಮತ್ತಷ್ಟು ಸದ್ಬಳಕೆ ಸಾಧ್ಯವಾಗಲಿದೆ. ಜತೆಗೆ ಆದಾಯವೂ ಲಭಿಸುತ್ತದೆ ಎಂಬ ಆಶಾಭಾವ ಮೂಡಿದೆ.
Leave a Comment