ಕಾಯಿಲ್ ಸ್ಟರ್ಶಿಸಿ ಯುವತಿ ಸಾವು
ಬೆಂಗಳೂರು : ನೀರು ಕಾಯಿಸುವ ಕಾಯಿಲ್ ಸ್ಪರ್ಶಿಸಿದ್ದರಿಂದ ವಿದ್ಯತ್ ತಗುಲಿ ಗಾಯಿತ್ರಿ ಹೆಗಡೆ (22) ಎಂಬುವರು ಮೃತಪಟ್ಟಿದ್ದು. ಈ ಸಂಬAಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯ ಗಾಯತ್ರಿ ಲೆಕ್ಕ ಪರಿ ಶೋಧಕರ (ಸಿ.ಎ) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಮರಿಯಪ್ಪನ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಿದ್ದರು ಎಂದು ಪೊಲೀಸರು ಹೇಳಿದರು.
ಭಾನುವಾರ ಬೆಳ್ಳಿಗೆ ಸ್ನಾನಕ್ಕೆಂದು ಬಕೆಟ್‌ನಲ್ಲಿ ನೀರು ತುಂಬಿಟ್ಟಿದ್ದ ಅವರು, ಬಿಸಿ ಮಾಡಲು ಎಲೆಕ್ಟಿçಕ್ ಕಾಯಿಲ್ ಹಾಕಿದ್ದರು ವಿದ್ಯತ್ ಸ್ವಿಚ್ ಆನ್ ಮಾಡಿದ್ದರು. ಕೆಲ ನಿಮಿಷಗಳ ನಂತರ ನೀರು ಕಾದಿದೆಯಾ ಎಂಬುದನ್ನು ನೋಡಲು ಬಕೆಟ್‌ನಲ್ಲಿ ಕೈ ಹಾಕಿದ್ದರು. ಇದೇ ಸಂದರ್ಭದಲ್ಲಿ ವಿದ್ಯತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಂದು ತಿಳಿಸಿದರು.
ಯುವತಿಯ ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು, ತನಿಖೆ ಕೈಗೊಳ್ಳಲಾಗಿದೆ. ಎಂದು ಪೊಲೀಸರು ಹೇಳಿದರು.
Leave a Comment