ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ – ಸಿ ಚಾರ್ಜರ್
ನವದೆಹಲಿ (ಪಿಟಿಐ) : ಭಾರತೀಯ ಮಾನಕ ಸಂಸ್ಥೆಯು (ಬಿಐಎಸ್) ಮೂರು ರೀತಿಯ ಎಲೆಕ್ಟಾçನಿಕ್ ಉಪಕರಣಗಳಿಗೆ ಗುಣಮಟ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಡಿಜಿಟಲ್ ಟಿ.ವಿ ರಿಸೀವರ್ಗಳು, ಟೈಪ್ – ಸಿ ಯುಎಸ್ಬಿ ಕೇಬಲ್ ಹಾಗೂ ವಿಡಿಯೋ ಕಣ್ಗಾವಲು ವ್ಯವಸ್ಥೆಗಳಿಗೆ (ವಿಎಸ್ಎಸ್) ಮಾನದಂಡಗಳನ್ನು ಗೊತ್ತುಪಡಿಸಿದೆ.
ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟಾçನಿಕ್ ಉಪಕರಣಗಳಲ್ಲೂ ಏಕರೂಪ ಬಳಕೆಗೆ ಹೊಂದುವ ರೀತಿಯಲ್ಲಿ ಟೈಪ್ – ಸಿ ವಿಧದ ಪೋರ್ಟ್, ಪ್ಲಗ್, ಕೇಬಲ್ಗಳನ್ನು ತಯಾರಿಸಬೇಕು ಎಂಬ ಮಾನದಂಡ ರೂಪಿಸಲಾಗಿದೆ. ದೇಶದಲ್ಲಿ ಮಾರಾಟವಾಗುವ ಎಲ್ಲ ರೀತಿಯ ಸ್ಮಾರ್ಟ್ಪೋನ್ ಗಳು ಹಾಗೂ ಇತರೆ ಎಲೆಕ್ಟಾçನಿಕ್ ಉಪಕರಣಗಳಿಗೆ ಏಕರೂಪದ ಚಾರ್ಜಿಂಗ್ ಸವಲತ್ತು ಒದಗಿಸುವುದಕ್ಕಾಗಿ ಈ ಮಾನದಂಡ ಗೊತ್ತುಪಡಿಸಲಾಗಿದೆ.
ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ – ಸಿ ಚಾರ್ಜರ್
ಈ ಮಾನದಂಡದಿAದಾಗಿ ಪ್ರತಿಯೊಬ್ಬ ಗ್ರಾಹಕರಿಗೂ ಪ್ರತ್ಯೇಕ ಚಾರ್ಜರ್ ಅನ್ನು ಒದಗಿಸುವ ಅಗತ್ಯ ಇರುವುದಿಲ್ಲ. ಪ್ರತಿ ಬಾರಿ ಉಪಕರಣ ಖರೀದಿಸಿದಾಗ ಗ್ರಾಹಕರು ತಮ್ಮ ಮೊಬೈಲ್ ಹೊಂದಿಕೆಯಾಗಬಲ್ಲ ಪ್ರತ್ಯೇಕ್ ಜಾರ್ಜರ್ ಅನ್ನು ಖರೀದಿಸುವ ಅಗತ್ಯವಿರುದಿಲ್ಲ. ಈ ಕ್ರಮದಿಂದ ಇ-ತ್ಯಾಜ್ಯ ಉತ್ಪಾದನೆಯೂ ತಗ್ಗಲಿದ್ದು ಚಾರ್ಜರ್ ಖರೀದಿಗೆ ಮಾಡುವ ವೆಚ್ಚವೂ ಉಳಿತಾಯವಾಗಲಿದೆ. ಹಲವು ದೇಶಗಳು ಈ ಮಾನದಂಡವನ್ನು ಅನುಸರಿಸುವತ್ತ ಹೆಚ್ಚೆ ಇರಿಸಿವೆ.
ಇತ್ತೀಚಿನ ದಿನಗಳಲ್ಲಿ ವಿಡಿಯೊ ನಿಗಾ ವ್ಯವಸ್ಥೆಗೆ ಹೆಚ್ಚಿನ ಬೇಡಿಕೆಯಿದ್ದು, ಗ್ರಾಹಕರಿಗೆ ಯಾವ ರೀತಿಯ ಉಪಕರಣಗಳನ್ನು ಖರಿದಿಸುವುದು ಸೂಕ್ತ ಎಂಬ ಗೊಂದಲವಿದೆ. ಇದನ್ನು ನಿವಾರಣೆ ಮಾಡುವುದಕ್ಕಾಗಿ ಮಾನಕ ಸಂಸ್ಥೆಯ ವಿಡಿಯೋ ನಿಗಾ ವ್ಯವಸ್ಥೆಗೆ ಮಾನದಂಡ ರೂಪಿಸಿದೆ.
ಕ್ಯಾಮರಾ, ಇಂಟರ್ ಫೇಸ್, ಇನ್ಸ್ಟಾಲೇಷನ್ ಮೊದಲಾದವುಗಳಿಗೆ ನಿಯಮಗಳನ್ನು ಗೊತ್ತುಪಡಿಸಿದೆ. ಭದ್ರತಾ ವ್ಯವಸ್ಥೆಯನ್ನು ಹೆಚ್ಚು ನಿಖರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಪಡೆಯುಲು ಈ ಮಾನದಂಡಗಳು ನೆರವಾಗುತ್ತವೆ.
Leave a Comment