ಅನಧಿಕೃತ ಹೋಂ ಸ್ಟೇ ಪರವಾನಿಗೆ ಪಡೆಯಲು ಪ್ರವಾಸೋದ್ಯಮ ಅಭಿವೃದ್ಧಿ ಸೂಚನೆ
ಕಾರವಾರ: ಅನಧಿಕೃತವಾಗಿ ನಡೆಸುವವರು ಪ್ರವಾಸೋದ್ಯಮ ಇಲಾಖೆಯಲ್ಲಿ ಪರವಾನಿಗೆ ಪಡೆಯಬೇಕು. ಇಲ್ಲದಿದ್ದರೇ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಎಚ್ಚರಿಕೆ ನೀಡಿದೆ.
ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರ ಅನುಕೂಲಕ್ಕಾಗಿ ಹೋಂ ಸ್ಟೇಗಳ ಪರವಾನಿಗೆ ಪಡೆದು ನಡೆಸುವುದು ಕಡ್ಡಾಯವಾಗಿರುತ್ತದೆ.
ಆದರೆ ಜಿಲ್ಲೆಯಲ್ಲಿ ಕೆಲವು ಹೋಂ ಸ್ಟೇಗಳು ಸಂಭಂದಿಸಿದ ಇಲಾಖೆಗೆ ನೋಂದಣಿ ಮಾಡಿಸದೇ ಹಾಗೂ ಪರವಣಿಗೆಯನ್ನು ಪಡೆಯದೇ ಕಾನೂನು ಬಹಿರವಾಗಿ ಹೋಂ ಸ್ಟೇ ಗಳನ್ನು ನಡೆಸುತ್ತಿರುವುದು ನಿರ್ಣಯವನ್ನ ಕಂಡು ಬಂದಿರುತ್ತದೆ.
ಇಲಾಖೆ ವ್ಯಾಪ್ತಿಯಲ್ಲಿ 250 ರಿಂದ 300 ಹೋಂ ಸ್ಟೇ ಮಾಲಿಕರು ಪರವಾನಿಗೆ ತೆಗೆದುಕೊಂಡಿದ್ದಾರೆ. ನಾನೂರಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇ ಗಳಿದೆ ಎನ್ನುವ ಮಾಹಿತಿಯನ್ನ ಪ್ರವಾಸೋದ್ಯಮ ಇಲಾಖೆ ಕಲೆ ಹಾಕಿದೆ.
ಆದರೆ ಹಲವು ಹೋಂ ಸ್ಟೇ ಮಾಲಿಕರು ಯಾವುದೇ ಪರವಾನಿಗೆ ತೆಗೆದುಕೊಳ್ಳದೇ ನಡೆಸುತ್ತಿದ್ದು ಒಂದೊಮ್ಮೆ ಪ್ರವಾಸಿಗರಿಗೆ ಎಲ್ಲೇ ಸಮಸ್ಯೆ ಆದರು ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಕೆಟ್ಟ ಹೆಸರು ಬರಲಿದೆ.
ಈ ನಿಟ್ಟಿನಲ್ಲಿ ಕ್ರಮಕ್ಕೆ ಪ್ರವಾಸೋದ್ಯಮ ಸಮಿತಿ ಮುಂದಾಗಿದೆ. ಜಿಲ್ಲೆಯ ಜೋಯಿಡಾ, ದಾಂಡೇಲಿ, ಗೋಕರ್ಣ ಹಾಗೂ ಮುರಡೇಶ್ವರ ಭಾಗದಲ್ಲಿ ಈ ಅನಧಿಕೃತ ಹೋಂ ಸ್ಟೇ ಗಳು ಹೆಚ್ಚಾಗಿ ತಲೆ ಎತ್ತಿದೆ.
ಅನಧಿಕೃತ ಹೋಂ ಸ್ಟೇ ಪರವಾನಿಗೆ ಪಡೆಯಲು ಪ್ರವಾಸೋದ್ಯಮ ಅಭಿವೃದ್ಧಿ ಸೂಚನೆ
ಹೋಂ ಸ್ಟೇಗಳ ಪರವಾನಿಗೆ ಪಡೆಯದೇ ಇರುವವರು 30 ದಿನಗಳೊಳಗೆ ರೇಣುಕಾ ಆನೈನ್ ವೆಬ್ಬೆಟ್ kttf.karnatakatourism, ಅಭಿವೃದ್ಧಿ org ಮೂಲಕ ನೊಂದಣಿ ಮಾಡಿಕೊಳ್ಳಲು ಸೂಚಿಸಿದೆ. ಪರವಾನಿಗೆ ಇಲ್ಲದೆ ಹೋಂ ಸ್ಟೇಗಳನ್ನು ನಡೆಸಿದಲ್ಲಿ ಅಂತವರ ವಿರುದ್ದ ಕಾನೂನು ಕ್ರಮಜರುಗಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂ ಖ್ಯೆ 08382221172 ಗೆ ಸಂಪರ್ಕಿಸಿ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
WEB SITE ; https://kttf.karnatakatourism.org/
Leave a Comment